ಕುಂದಾಪುರ, 2024 ಜೂನ್ 16 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸ್ಸಿ ಚರ್ಚಿನಲ್ಲಿ ಕುಟುಂಬ ಆಯೋಗದಿಂದ ವಿಶ್ವ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೊದಲಿಗೆ ಚರ್ಚಿನ ಧರ್ಮ ಗುರುಗಳಾದ ರೆ. ಫಾ. ಎಡ್ವಿನ್ ಡಿಸೋಜರವರು ಬಲಿ ಪೂಜೆಯನ್ನು ಅರ್ಪಿಸಿದರು. ನಂತರ ಅವರು ಬಳಿಕ ಚರ್ಚಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಗತ ಕೋರಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾಗಿರುವ ಶ್ರೀಯುತ ಲೆಸ್ಲಿ ಆರೋಜರವರು ಹಾಜರಿದ್ದು ಕುಟುಂಬದಲ್ಲಿ ತಂದೆಗೆ ಇರುವ ಸ್ಥಾನಮಾನ ಮತ್ತು ಮಹತ್ವವನ್ನು ವಿವರಿಸಿದರು. ರೆ. ಫಾ. ಎಡ್ವಿನ್ ಡಿಸೋಜರವರು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ 90 ಮಂದಿ ಅಪ್ಪಂದಿರಿಗೆ ಅಭಿನಂದಿಸಿ ಶಾಲು ಹೊದಿಸಿ ಸನ್ಮಾನಿಸಿದರು.
ವೈ.ಸಿ.ಎಸ್ ಸಂಘಟನೆಯ ಸದಸ್ಯರು ಅಭಿನಂದನಾ ಗೀತೆಯನ್ನು ಹಾಡಿದರು. ಕುಟುಂಬ ಆಯೋಗದ ಸಂಚಾಲಕರಾದ ಶ್ರೀಯುತ ರಾಜೇಶ್ ಮೆಂಡೋನ್ಸಾ ಅವರು ಧನ್ಯವಾದ ಸಲ್ಲಿಸಿ, ಕುಮಾರಿ ಜೋನಿಟಾ ಮೆಂಡೋನ್ಸಾ ಕಾರ್ಯಕ್ರಮವನ್ನು ನಿರೂಪಿಸಿದರು.ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.