ತಲ್ಲೂರು ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಕ್ರಮ

JANANUDI.COM NETWORK

ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ರೋಟರಿ ಸಮುದಾಯದಳ ತಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ದಿನಾಂಕ 18.02.2021 ರಂದು ಮಧ್ಯಾಹ್ನ 2.30 ಕ್ಕೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಎಚ್. ರಾಘವೇಂದ್ರ ಹೆಬ್ಬಾರ್ , ಮಕ್ಕಳ ತಜ್ಞರು ಕುಂದಾಪುರ ಇವರು ವಿಶೇಷ ಮಕ್ಕಳ ಪಾಲನೆ ಪೋಷಣಿ, ಮತ್ತು ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ವಿವರಣೆಯನ್ನು ನೀಡಿ ಸಂದೇಹಗಳಿಗೆ ಪರಿಹಾರವನ್ನು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಯಕರ್ತರಾದ ಅನಿತಾ, ಗಿರಿಜಾ, ಶ್ರೀವಿತಾ ಮತ್ತು ಹರ್ಪಿತಾ ಇವರ ಸೇವಾ ಮನೋಭಾವವನ್ನು ಗುರುತಿಸಿ,ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ, ಉಪ್ಪಿನಕುದ್ರು ಗೂಂಬೆಯಾಟ ಆಕಾಡೆಮಿಯ ಭಾಸ್ಕರ ಕೂಗ್ಗ ಕಾಮತ್ ರವರು ವಿಶೇಷ ಮಕ್ಕಳ ಬಗೆಗಿನ ಹೆತ್ತವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧೈರ್ಯ ಕುಂದದೆ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಮತ್ತು ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಮತ್ತೂರ್ವ ಮುಖ್ಯ ಅತಿಥಿ ಕಸ್ಟಮ್ಸ್ ಮತ್ತು ಜಿ.ಎಸ್.ಟಿ ಇದರ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಕನ್ಯಾನ ಪ್ರಭಾತ್ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸಭೆಯಲ್ಲಿ ತಲ್ಲೂರು ಗ್ರಾಮಪಂಚಾಯತ್ ಸದಸ್ಯರಾದ ಜುಡಿತ್ ಮೇಂಡೊನ್ಸಾ, ರೋಟರಿ ಸಮುದಾಯ ದಳ ತಲ್ಲೂರು ಇದರ ಸಭಾಪತಿ ಓಝಲಿನ್ ರೆಬೆಲ್ಲೊ ಉಪಸ್ಥಿತರಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು, ಟ್ರಸ್ಟಿ ಮನೋರಮರವರು ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ರವರು ಕಾರ್ಯಕ್ರಮ ನಿರೂಪಿಸಿದರು
.