ಕುಂದಾಪುರ( ಸೆ 18) : ಶ್ರೀ ಬಿ.ಎಮ್ ಸುಕುಮಾರ ಶೆಟ್ಟಿಯವರ ನೇತೃತ್ವದಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಕುಂದಾಪುರಎಜುಕೇಶನ್ ಸೊಸೈಟಿ ಪ್ರವರ್ತಿತ ಹಲ್ಸನಾಡು ಮಾದಪ್ಪಯ್ಯ ಸ್ಮಾರಕಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತುಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರ ಇದರ ವತಿಯಿಂದಆಯೋಜಿಸಲ್ಪಟ್ಟ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ2024-25ರಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ, ವಿದ್ಯಾರ್ಥಿಗಳಾದ, ಅವನಿ ಎ ಶೆಟ್ಟಿಗಾರ್(ಡ್ರಾಯಿಂಗ್),ಕೃತಿಕಾ (ಅಭಿನಯಗೀತೆ), ಪ್ರಕೃತಿ(ಕಥೆ ಹೇಳುವುದು), ಸಂಹಿತಾ-(ದೇಶಭಕ್ತಿಗೀತೆ ಮತ್ತು ಭಕ್ತಿಗೀತೆ), ಆದರ್ಶ (ಕ್ಲೇ ಮಾಡೆಲಿಂಗ್),ಮನೀಶ್ (ಆಶುಭಾಷಣ),ಶ್ರೀಲತಾ (ಹಿಂದಿ ಕಂಠಪಾಠ) ಪ್ರಥಮ ಸ್ಥಾನಗಳನ್ನೂ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಗೋಪಿಕಾ(ಭಕ್ತಿಗೀತೆ,)ಪ್ರಣೀತಾ(ಕ್ಲೇ ಮಾಡೆಲಿಂಗ್),ಅದ್ವಿಕ್(ಡ್ರಾಯಿಂಗ್) ಪ್ರಥಮ ಸ್ಥಾನವನ್ನು, ಹಿರಿಯ ಪ್ರಾಥಮಿಕ ವಿಭಾಗದಲ್ಲಿಆಧ್ಯಾ ಶೆಟ್ಟಿ(ಪ್ರಬಂಧ), ಚಿನ್ಮಯ್(ಸಂಸ್ಕøತಧಾರ್ಮಿಕ ಪಠಣ), ತ್ರಿಶೂಲ್(ಮಿಮಿಕ್ರಿ), ಗಹನ (ಇಂಗ್ಲೀಷ್ಕಂಠಪಾಠ), ಭುವನ(ಛದ್ಮವೇಷ), ಸಿಂಚನ (ಕನ್ನಡಕಂಠಪಾಠ) ದ್ವಿತೀಯ ಸ್ಥಾನಗಳನ್ನು ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿಗೋಪಿಕಾ (ದೇಶಭಕ್ತಿಗೀತೆ) ಮತ್ತು ಸಾತ್ವಿಕ್(ಆಶುಭಾಷಣ) ದಲ್ಲಿ ದ್ವಿತೀಯ ಸ್ಥಾನವನ್ನುಅದೇರೀತಿರುಚಿತಾ(ಕನ್ನಡಕಂಠಪಾಠ),ಆಯಿಷಾ ತುಲ್ ಸುಹಾನಾ(ಅರೇಬಿಕ್ಕಂಠಪಾಠ)ತೃತೀಯ ಸ್ಥಾನಗಳನ್ನು ಗಳಿಸಿರುವುದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದಡಾ. ಚಿಂತನಾರಾಜೇಶ್ ಹಾಗೂ ಇತರ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.