
ಕೋಟೇಶ್ವರ: ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಮೇ.25ರಂದು ಭಾನುವಾರ ಮಧ್ಯಾಹ್ನ 2ಕ್ಕೆ ಬೀಜಾಡಿ ಮಿತ್ರಸೌಧದಲ್ಲಿ ವಲಯ ಅಧಿವೇಶನ, ಸಾಧಕರಿಗೆ ಸನ್ಮಾನ, ಕೋಟೇಶ್ವರ, ಕುಂಬ್ರಿ-ಬಡಾಕೆರೆ, ಹೋದ್ರಾಳಿ, ದೊಡ್ಡೋಣಿ, ಮಾರ್ಕೋಡು, ಕಟ್ಕೆರೆ, ಬೀಜಾಡಿ, ಗೋಪಾಡಿ, ಮೂಡುಗೋಪಾಡಿ, ಕುಂಭಾಶಿ, ಕೋಟೇಶ್ವರ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಓದುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿಧ್ಯಾರ್ಥಿಗಳಿಗೆ ಉಚಿತ ನೋಡ್ಸ್ ಪುಸ್ತಕ,ಕೊಡೆ ವಿತರಣೆ ಹಾಗೂ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಘಟಕದ ಪ್ರಕಟಣೆ ತಿಳಿಸಿದೆ.