

ಕುಂದಾಪುರ, ಎ.2; ಸ್ಥಳೀಯ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್ 1 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಯಾಗಿರುವ ರೋಜರಿ ಮಾತಾ ಚರ್ಚಿ ಧರ್ಮಗುರು ಅ।ವ।ವಂದನೀಯ ಪೌಲ್ ರೇಗೊ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ವಿ. ಅವರನ್ನು ಸನ್ಮಾನಿಸಲಾಯಿತು. ಅವರು ಬಹುಮಾನ ವಿತರಿಸಿ ‘’ಇಲ್ಲಿನ ಮಕ್ಕಳನ್ನು ನೋಡಿ ತುಂಬಾ ಸಂತೋಷವಾಗುತ್ತದೆ, ಈ ಶಾಲೆ ಶಿಸ್ತು ಬದ್ದ ಶಾಲೆಯಾಗಿದೆ, ಈ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತದೆ, ಇಲ್ಲಿ ನಿಮಗೆ ಪಿಯುಸಿ ವರೆಗೆ ವಿಧ್ಯಾಭಾಸಕ್ಕೆ ಅವಕಾಶ ಇದೆ, ನಿಮ್ಮಭವಿಶ್ಯಕ್ಕಾಗಿ ನೀವು ಪಿಯುಸಿ ವರೆಗೆ ಇಲ್ಲಿಯೆ ಕಲಿಯಿರಿ, ಈ ಶಿಕ್ಷಣ ಸಂಸ್ಥೆಗಳು ನನಗೆ ಅನೇಕ ಸಲ ಗೌರವಿಸಿದೆ, ಇದನ್ನು ಸದಾಕಾಲವೂ ನಾನು ಸ್ಮರಿಸುತ್ತೇನೆ’ ಎಂದು ಹೇಳಿದರು. ಶಾಲಾ ಅಭಿವ್ರದ್ದಿ ಸಮೀತಿಯ ಸದಸ್ಯರಾದ್ ಬರ್ನಾಡ್ ಡಿಕೋಸ್ತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೆಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ಸ್ವಾಗತಿಸಿದರು, ಶಿಕ್ಷಕಿಯರಾದ ಶ್ರೀಮತಿ, ಆಶಾ, ಪ್ರೀತಿ, ಗೀತಾ ನೊರೊನ್ಹಾ ಕಾರ್ಯಕ್ರಮ ನೆಡೆಸಿಕೊಟ್ಟರು. ಶಿಕ್ಷಕಿ ಜ್ಯೋತಿ ಡಿಸಿಲ್ವಾ ವಂದಿಸಿದರು































































