ಕುಂದಾಪುರ,ಡಿ24: ಸ್ಥಳೀಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಡಿ.22 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿಯವರು ವಹಿಸಿದ್ದು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ಪ್ರತಿಭಾ ಪುರಸ್ಕ್ರತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಿ “ಇಂದು ಬಹುಮಾನ ಪಡೆದ ಮತ್ತು ಪಡೆಯದ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಹುಮಾನ ಸಿಗದೆ ಇರುವರು ಯಾರೂ ನಿರಾಶರಾಗಬೇಕಿಲ್ಲಾ, ಪ್ರಯತ್ನ ಪಟ್ಟರೆ ಮುಂದೆ ಬಹುಮಾನಗಳು ಲಭಿಸುತ್ತವೆ. ಕನ್ನಡ ಮಾಧ್ಯಮ ಎಂದು ಕೀಳರಿಮೆ ಬೇಡ, ಕನ್ನಡದಲ್ಲಿ ಕಲಿತರೆ ಸಾಕಷ್ಟು ಲಾಭಗಳಿವೆ. ಎಸ್.ಎಸ್.ಎಲ್.ಸಿ. ಯಲ್ಲಿರುವ ವಿದ್ಯಾರ್ಥಿಗಳು ಪ್ರಯತ್ನ ಪಟ್ಟು ಶಾಲೆಗೆ ಶೇಕಡ 100 ಫಲಿತಾಂಶ ಪಡೆಯ ಬೇಕು” ಎಂದು ತಿಳಿ ಹೇಳುತ್ತಾ “ಇಂದು ನೀವು ಕ್ರಿಸ್ಮಸ್ ಆಚರಣೆ ಮಾಡಿದ್ದಿರಿ, ಯೇಸು ಶಾಂತಿದೂತನಾಗಿ ಬಂದು, ನೂತನ ಉಪದೇಶವನ್ನು ನೀಡಿದ, ನಮಗೆ ಅನ್ಯಾಯ ಮಾಡಿದವರಿಗೆ, ಹಿಂಸಿಸಿದವರಿಗೆ ಕ್ಷಮೆ ಕೋರಲು ತಿಳಿಸಿದ, ನಮ್ಮನ್ನು ಹೊಡೆದರೆ ತೀರುಗೇಟು ನೀಡುವುದು ಸುಲಭ ಆದರೆ ಕ್ಷಮಾದಾನ ಮಾಡಲಿಕ್ಕೆ ಕಷ್ಟವಾಗುತ್ತೆ, ಆದರೂ ಯೇಸುವಿನ ತತ್ವ ಕ್ಷಮಿಸಿ ಶಾಂತಿ ಬಾಳ್ವೆಗೆ ದಾರಿ ಮಾಡಿಕೊಡುವುದು” ಎಂದರು.ಹೇಳಿದರುಇನ್ನೋರ್ವ ಅತಿಥಿ ದಾನಿಗಳಾದ ಇದೇ ಶಾಲೆಯ ಕ್ಲಾರ್ಕ್ ವ್ರತ್ತಿಯಿಂದ ನಿವ್ರತ್ತಿ ಹೊಂದಿದ ವಿನಯಾ ಪಿಂಟೊ ಬಹುಮಾನಗಳನ್ನು ವಿತರಿಸಿ, ಎಸ್.ಎಸ್.ಎಲ್.ಸಿ. ಯಲ್ಲಿ ಡಿಸ್ಟಿಂಕ್ಷನ್ ಬರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ” ಹೇಳಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಗಳು, ನ್ರತ್ಯ, ಕ್ರಿಸ್ಮಸ್ ಗೀತೆಗಳನ್ನು ಹಾಡಿದರು. ಶಿಕ್ಷಕಿ ಸಸ್ರ್ಪತಿ ಅತಿಥಿಗಳ ಪರಿಚಯವನ್ನು ನೀಡಿದರು. ಶಿಕ್ಷಕಿ ಶ್ರೀಲತಾ ಬಹುನಾನಿತರ ಪಟ್ಟಿಯನ್ನು ವಾಚಿಸಿದರು. ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.