ಕೋಲಾರ,ಜು.23: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂಸ್ವಾಧಿನಾವಾಗಿರುವ ಗಡಿಭಾಗದ ರೈತರ 2ನೇ ಕಂತಿನ ಪರಿಹಾರ ವಿತರಣೆ ಮಾಡಲು ವಿಳಂಭ ಮಾಡುತ್ತಿರುವ ವಿಶೇಷ ಭೂಸ್ವಾಧಿನಾಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಪರಿಹಾರ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ಮಾನ್ಯ ಸಂಸದರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಗಡಿಭಾಗದ ರೈತರಿಗೆ ಪರಿಹಾರ ವಿತರಣೆ ಮಾಡಬೇಕಾದರೆ ವಿಶೇಷ ಭೂ ಸ್ವಾದಿನಾಧಿಕಾರಿಗಳಿಗೆ ತಾಲ್ಲೂಕು ದಂಡಾಧಿಕಾರಿಗಳ ವರದಿ ಬೇಕು ಆದರೆ ಕೊಳತೂರು ಮಾಲೂರು ವ್ಯಾಪ್ತಿಯ ರೈತರ ಪರಿಹಾರ ನೀಡಲು ಯಾವುದೇ ವರದಿ ಕೇಳುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಭೂಸ್ವಾಧಿನಾಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೂರು ನೀಡಿದರು.
ರಸ್ತೆ ಕಾಮಗಾರಿ ಕೊನೆಯ ಹಂತ ತಲುಪುತ್ತಿದ್ದು 10 ವರ್ಷಗಳಿಂದ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂಸ್ವಾದಿನವಾಗಿರುವ ಗಡಿಭಾಗದ ಏತುರಹಳ್ಳಿ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ರೈತರು ತಾಲ್ಲೂಕಾಡಳಿತಕ್ಕೆ ಏನೂ ಪಾಪ ಮಾಡಿದ್ದಾರೋ ಗೊತ್ತಿಲ್ಲ, ಸರ್ವೇ ನಂ.34 ರಲ್ಲಿ ಮಾರಪ್ಪ ಬಿನ್ ಲೇಟ್ ವೆಂಕಟೇಶಪ್ಪ, ವೆಂಕಟೇಶಪ್ಪ ಬಿನ್ ಲೇಟ್ ವೆಂಕಟಪ್ಪ ರವರಿಗೆ ಸಿಗಬೇಕಾದ ಭೂಮಿ ಹಾಗೂ ಮರಗಿಡಗಳ ಪರಿಹಾರ ಪಡೆಯಲು ಹತ್ತಾರು ವರ್ಷಗಳಿಂದ ತಾಲ್ಲೂಕಾಡಳಿತದ ಅಧಿಕಾರಿಗಳ ಬಳಿ ಅಲೆದಾಡಿದರೂ ಕನಿಷ್ಠ ಸೌಜನ್ಯಕ್ಕಾದರೂ ರೈತರಿಗೆ ಗೌರವ ನೀಡದೇ ದಾಖಲೆಗಳನ್ನು ಕೊಡದೆ ವರದಿಯನ್ನು ಸಮರ್ಪಕವಾಗಿ ನೀಡದೇ ಪ್ರತಿ ದಿನ ನಕ್ಷತ್ರಗಳನ್ನು ತೋರಿಸುತ್ತಿರುವ ಇಲಾಖೆಯ ಶ್ರೀನಿವಾಸ್ ಕೇಳಿದರೆ ಆರ್.ಐ ವಿ.ಎ ವರದಿ ಬರಲಿ ಎಂದು ಹೇಳುತ್ತಾರೆ. ವರದಿ ಬಂದರೆ ತಹಶೀಲ್ದಾರ್ರವರು ಸಿಗುತ್ತಿಲ್ಲ ಎಂದು ಹೇಳುತ್ತಿರುವ ಅಧಿಕಾರಿಯ ವಿರುದ್ದ ಕ್ರಮವಿಲ್ಲವೇಕೆ? ರೈತರೆಂದರೆ ಅಷ್ಟು ಬೇಜವಬ್ದಾರಿಯೇ ವರದಿ ಇಲ್ಲ ಎಂದರೆ ಕಡತ ಕೊಡಿ ಕಡತ ಇಲ್ಲವೆಂದರೆ ಸಂಭಂದಪಟ್ಟ ಅಧಿಕಾರಿಗಳನ್ನು ವಜಾ ಮಾಡಿ ರೈತರಿಗೆ ನ್ಯಾಯ ಕೊಡಿಸಬಹುದಲ್ಲವೇ ಎಂದು ಸಂಸದರಿಗೆ ಪ್ರಶ್ನೆ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಬಡ ರೈತರೆಂದರೆ ಅಧಿಕಾರಿಗಳಿಗೆ ಏಕೆ ನಿರ್ಲಕ್ಷ ಸರ್ಕಾರದಿಂದ ಬರುವ ಪರಿಹಾರವನ್ನು ಪಡೆಯಲು ಇನ್ನಷ್ಟು ದಿನ ಕೆಲಸ ಬಿಟ್ಟು ಅಧಿಕಾರಿಗಳ ಕಾಲು ಕೈ ಹಿಡಿಯಬೇಕು. ಭೂಗಳ್ಳರಿಗೆ 24 ಗಂಟೆಯಲ್ಲಿ ಸಿಗುವ ದಾಖಲೆಗಳು ಬಡ ರೈತರ ದಾಖಲೆಗಳು ಏಕೆ ಸಿಗುತ್ತಿಲ್ಲ. ದಾಖಲೆಗಳು ಇಲ್ಲ ವರದಿಯೂ ಇಲ್ಲ ಅಧಿಕಾರಿಗಳಿಂದ ಉತ್ತರವೂ ಇಲ್ಲ, ಕಡೆಯದಾಗಿ ದಲಿತ ರೈತರಿಗೆ ನ್ಯಾಯ ಕೊಡಿಸಬೇಕೆಂದು ಸಂಸದರನ್ನು ಒತ್ತಾಯಿಸಿದರು.
ಗಡಿಭಾಗದ ಏತುರಹಳ್ಳಿ ಚುಕ್ಕನಹಳ್ಳಿ ರೈತರ 2ನೇ ಕಂತಿನ ಹಣವನ್ನು ಬಿಡುಗಡೆ ಮಾಡುವಂತೆ ವಿಶೇಷ ಭೂಸ್ವಾಧಿನಾಧಿಕಾರಿಗಳಿಗೆ ಸೂಚನೆ ಮಾಡುವಂತೆ ಮನವಿ ನಿಡುವ ಜೊತೆಗೆ ಒಚಿದು ವೇಳೆ ಗಡಿಭಾಗದ ರೈತರಿಗೆ ಪರಿಹಾರ ನೀಡಲು ಪದೇ ಪದೇ ವರದಿ ನೆಪದಲ್ಲಿ ಬಡರೈತರನ್ನು ವಂಚನೆ ಮಾಡಿದರೆ ಆ.1 ರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಸಮಸ್ಯೆ ಬಗೆಹರಿಸುವರೆಗೂ ಆಹೋರಾತ್ರಿ ಹೋರಾಟ ಮಾಡುವುದಾಗಿ ಸಂಸದರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರಾದ ಮಲ್ಲೇಶ್ಬಾಬು ಹಾಗೂ ಜಿಲ್ಲಾಧಿಕಾರಿಗಳಾದ ಆಕ್ರಂ ಪಾಷರವರು ಗಡಿಭಾಗದ ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ತಾಲ್ಲೂಕಾದ್ಯಕ್ಷ ಮೂರಾಂಡಹಳ್ಳಿ ಶಿವಾರೆಡ್ಡಿ, ಗೀರೀಶ್, ಸುಪ್ರೀಂ ಚಲ, ಶಶಿ, ಶಿವ, ನಾರಾಯಣಸ್ವಾಮಿ, ಮಾರಪ್ಪ, ಮಂಗಸಚಿದ್ರ ತಿಮ್ಮಣ್ಣ, ವೆಂಕಟೇಶಪ್ಪ, ಶೈಲಜ, ರಾಧಮ್ಮ, ಶೋಭ, ಚೌಡಮ್ಮ, ಸುಗುಣ, ನಾಗರತ್, ಮುಂತಾದವರಿದ್ದರು.