ಶ್ರೀನಿವಾಸಪುರ : ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಅಕ್ರಮ ಸಕ್ರಮಕ್ಕಾಗಿ ಸರ್ಕಾರ ಅರ್ಜಿ ಬಿಡುಗಡೆ ಮಾಡಿದ್ದರು ಆದರೆ ತಾಲೂಕಿನಲ್ಲಿ ಬಹುತೇಕರು ಅರ್ಜಿ ಸಲ್ಲಿಸಿವೆಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಬುಧವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಅಕ್ರಮವನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುವ ಶೇ 80 ರಷ್ಟು ಜನರಿಗೆ ಸಕ್ರಮ ಮಾಡಿಕೊಟ್ಟಿದೆ. ಯಾರು ಯಾರು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದೀರೋ ಅವರು ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದರು. ಸ್ವಂತ ನಿವೇಶಗಳು ಇಲ್ಲದವರೂ ಅರ್ಜಿ ಸಲ್ಲಿಸಿದಾಗ ಅರ್ಜಿಯನ್ನು ಪರಿಶೀಲಿಸಲಾಗುವುದು ಎಂದರು.
ಮುಳಬಾಗಿಲು ಡಿವೈಎಸ್ಪಿ ನಂದಕುಮಾರ್ ಮಾತನಾಡಿ ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕುಂದುಕೊರತೆ ಸಭೆ ಕರೆದಿದ್ದೇವೆ. ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟವನ್ನು ತಡೆಗಟ್ಟುವದರ ಜೊತೆಗೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಳ್ಳವಂತೆ ಎಂದು ಭರವಸೆ ನೀಡಿದರು.
ಇಒ ಶಿವಕುಮಾರಿ ಮಾತನಾಡಿದರು. ಸಿಪಿಐಗಳಾದ ಎಂ.ಬಿ.ಗೊರವನಕೊಳ್ಳ, ಶಿವಕುಮಾರ್ ಹಾಗು ದಲಿತ ಮುಖಂಡರು ಇದ್ದರು.