ಭೂ ಮಾಪಿಯಾ,ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಶರಣಾಗಿರುವ ತಹಶೀಲ್ದಾರ್ ಶೋಬಿತ ವಿರುದ್ಧ ೧೮-೦೩-೨೦೨೨ ಶುಕ್ರವಾರ ಎ.ಸಿ. ಕಚೇರಿ ಮುತ್ತಿಗೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಮುಳಬಾಗಿಲು : ಸರ್ಕಾರಿ ಆಸ್ತಿಗಳನ್ನು ಉಳಿಸುವಂತೆ ದಾಖಲೆಗಳ ಸಮೇತ ದೂರು ನೀಡಿದರೂ ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಸ್ಥಳ ಪರೀಶೀಲನೆ ಮಾಡದೆ ಭೂ ಮಾಪಿಯಾ ಹಾಗೂ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಶರಣಾಗಿರುವ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ತಹಶೀಲ್ದಾರ್ ಶೋಬಿತ ವಿರುದ್ಧ ಕ್ರಮ ಕೈಗೊಳ್ಳುವಂತೆ ದಿನಾಂಕ ೧೮-೦೩-೨೦೨೨ ಶುಕ್ರವಾರ ಎ.ಸಿ. ಕಚೇರಿ ಮುತ್ತಿಗೆ ಹಾಕಲು ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು . ಸರ್ಕಾರಿ ಕೆಲಸ ದೇವರ ಕೆಲಸ ಜನಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳ ಪಡೆದು ಜನ ಸೇವಕರಾಗಬೇಕಾದ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೂ ಮಾಫಿಯಾ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಜನ ಸಾಮಾನ್ಯರ ಚಿಕ್ಕಪುಟ್ಟ ಕೆಲಸಗಳಿಗೂ ದಲ್ಲಾಳಿಗಳ ನೆರಳಿಲ್ಲದೆ ಅಧಿಕಾರಿಗಳ ಭಾಗಿಲನ್ನು ಮುಟ್ಟುವಂತಿಲ್ಲ.ಅಷ್ಟರ ಮಟ್ಟಿಗೆ ತಾಲ್ಲೂಕಾಡಳಿತ ಹದಗೆಟ್ಟಿದೆ ಎಂದು ರೈತ ಸಂಘದ ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು . ಒತ್ತುವರಿಯಾಗಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಕೆರೆ ರಾಜಕಾಲುವ ಗೋಮಾಳ ತೆರವುಗೊಳಿಸುವಂತೆ ಸರ್ವೇ ನಂಬರ್ ದಾಖಲೆಗಳ ಸಮೇತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರಿ ಆಸ್ತಿಗಳನ್ನು ಉಳಿಸುವಲ್ಲಿ ತಹಶೀಲ್ದಾರ್‌ರವರು ವಿಫಲವಾಗುವ ಜೊತೆಗೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದಾರೆಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ , ತಾಲ್ಲೂಕಿನಾದ್ಯಾಂತ ಸಾವಿರಾರು ಎಕರೆ ಸರ್ಕಾರಿ ಆಸ್ತಿಯನ್ನು ಕಂದಾಯ ಸರ್ವೇ , ನೋಂದಣಿ ಇಲಾಖೆ ಅಧಿಕಾರಿಗಳೇ ನಿಯತ್ತಾಗಿ ಆಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಫಿಯಾ ದಂದೆ ಕೋರರ ಮನೆ ಭಾಗಿಲಿಗೆ ನಿಯತ್ತಾಗಿ ತಲುಪಿಸುವ ದಂದೆ ಇಲಾಖೆಯಲ್ಲಿ ಹೆಚ್ಚಾಗಿದೆ . ಕಸಬಾ ಹೋಬಳಿ ವ್ಯಾಪ್ತಿಯ ವೈ.ಕೋಗಿಲೇರಿ ಸರ್ವೇ ನಂ .೬೩ ರಲ್ಲಿ ೪೮೦ ಎಕರೆ ಗೋಮಾಳ ಆಕ್ರಮ ಒತ್ತುವರಿಯನ್ನು ತೆರೆವುಗೊಳಿಸಲು ದಾಖಲೆಗಳ ಸಮೇತ ದೂರು ನೀಡಿದರೂ ಆಕ್ರಮವನ್ನು ಸಕ್ರಮವನ್ನು ಮಾಡಲು ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು . ದೇವರಾಯ ಸಮುದ್ರ ಕಂದಾಯ ವ್ಯಾಪ್ತಿಯಲ್ಲಿ ಬೆಂಗಳೂರು ಮೂಲದ ಭೂ ಮಾಫಿಯಾ ದಂದೆ ಕೋರರು ಬಡವರ ೨ ಎಕರೆ ಖರೀದಿ ಮಾಡಿ ಪಕ್ಕದಲ್ಲಿನ ೧೦ ಎಕರೆಗೆ ಕಾಂಪೌಂಡ್ ನಿರ್ಮಿಸಿದ್ದರೂ ಅವರ ವಿರುದ್ಧ ಕ್ರಮವಿಲ್ಲ , ಜೊತೆಗೆ ಸರ್ವೇ ನಂ .೭೧೨ , ೧೧೨ , ೪೧೮ , ೪೨೨ , ತಮೇಗೌಡನ ಕೆರೆ ೧೪೫ ಸೇರಿದಂತೆ ನೂರಾರು ಎಕರೆ ಆಕ್ರಮ ಒತ್ತುವರಿ ಜೊತೆಗೆ ಕಲ್ಲುಬಂಡೆಗಳಿದ್ದರೂ ದಾಖಲಾತಿಗಳನ್ನು ನೀಡುವ ಮೂಖಾಂತರ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು . Dea , ದಾಖಲೆಗಳ ವಿಭಾಗ ಭೂಗಳರ ರಾಜಕೀಯ ವ್ಯಕ್ತಿಗಳ ತವರು ಮನೆಯಾಗೊ ಮಾರ್ಪಡಿಸಿ , ಪ್ರತಿಯೊಂದು ಪ್ರಮುಖ ಕಡತವನ್ನು ಹೊರಗೆ ನೀಡುವ ಮೂಖಾಂತರ ಭ್ರಷ್ಟಚಾರ ನಡೆಯುತ್ತಿದ್ದರೂ ಕ್ರಮ ಕೈಗೊಳದ ಜೊತೆಗೆ ಸರ್ಕಾರಿ ಆಸ್ತಿಗಳನ್ನು ಉಳಿಸುವಲ್ಲಿ ವಿಪಲವಾಗಿರುವ ತಹಶೀಲ್ದಾರ್ ವಿರುದ್ಧ ಮೇಲ್ಕಂಡ ದಿನಾಂಕದಂದು ಎ.ಸಿ ಕಚೇರಿ ಮುತ್ತಿಗೆ ಹಾಕುವ ನಿರ್ಧಾರವನ್ನು ಕೈಗೊಳ್ಳಲಾಯಿತು .

ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ , ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ , ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಹೆಬ್ಬಣಿ ಆನಂದರೆಡ್ಡಿ , ನಂಗಲಿ ಕಿಶೋರ್ , ಪದ್ಮಘಟ್ಟ ಧರ್ಮ , ನಾಗೇಶ್ , ಕೋಲಾರ ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್‌ , ಮರಗಲ್ ಮುನಿಯಪ್ಪ , ಮಂಗಸಂದ್ರ ತಿಮ್ಮಣ್ಣ , ಕುವಣ್ಣ , ನಾರಾಯಣಗೌಡ , ಪಾರಂಡಹಳ್ಳಿ ಮಂಜುನಾಥ್ , ರಾಮಸಾಗರ ಸಂದೀಪ್‌ಗೌಡ , ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಪ್ಪ , ಹರೀಶ್ , ಯಾರಂಘಟ್ಟ ಗೀರೀಶ್ , ಮುಂತಾದವರಿದ್ದರು .