ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ವಿ.ರೆಡ್ಡಪ್ಪ, ಉಪಾಧ್ಯಕ್ಷೆಯಾಗಿ ಮಂಗಮ್ಮ ಎರಡನೇ ಅವಧಿಗೆ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಗುರುವಾರ ಚುನಾವಣೆ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿಯ ಎಲ್ಲಾ 17 ಸದಸ್ಯರು ಹಾಜರಿದ್ದು, ಮತದಾನ ಇಲ್ಲದೆ ಅದ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಿದರು.
ಚುನಾವಣಾಧಿಕಾರಿ ಎಂ.ಎನ್.ಗಣೇಶ್, ಪಿಡಿಒ ಚಂದ್ರಶೇಖರ್, ಮುಖಂಡ ದೊರೆಸ್ವಾಮಿರೆಡ್ಡಿ ಇದ್ದರು.