JANANUDI.COM NETWORK

ಚಳ್ಳಕೆರೆಯ ಶಾಸಕರಾದ ಟಿ.ರಘುಮೂರ್ತಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯಲ್ಲಿ ಕಾಮಗಾರಿ ಹಂತದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ, ಕಟ್ಟಡದ ಗುಣಮಟ್ಟ ಹಾಗೂ ಶಾಲಾ ಆವರಣದಲ್ಲಿ ದೊರಕಿಸಿಕೊಡಬೇಕಾಗಿರುವ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿರ್ಮಾಣ ಪೂರ್ಣಗೊಳಿಸಿ ಮಕ್ಕಳ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚಿಸಲಾಯಿತು.ಈ ವೇಳೆ ಷಣ್ಮುಖಪ್ಪ, ಪ್ರಾಂಶುಪಾಲರಾದ ಜಯಪ್ಪ, ಕಾಂಟ್ರ್ಯಾಕ್ಟರ್ ಗುರುಮಲ್ಲಪ್ಪ, ಇಂಜಿನಿಯರ್ ಪ್ರೇಮಸಾಗರ್, ತುರುವನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೇದಾನಂದ ಹಾಗೂ ಇನ್ನಿತರರು ಹಾಜರಿದ್ದರು.