ಟಿ.ಕುರುಬರಹಳ್ಳಿ ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಂಜೂರು ಮಾಡಬಾರದು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಮುಳಬಾಗಿಲು,ಮಾ.03: ಟಿ.ಕುರುಬರಹಳ್ಳಿ ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಗೋಮಾಳ ಸ.ನಂ. 37, 36 ರ 65 ಎಕರೆ ಜಮೀನನ್ನು ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಬೇರೆ ಯಾರಿಗೂ ಮಂಜೂರು ಮಾಡಬಾರದೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹರವರಿಗೆ ಮನವಿ ನಿಡಿ ಅಗ್ರಹಿಸಲಾಯಿತು
ಟಿ.ಕುರುಬರಹಳ್ಳಿ ಗ್ರಾಮಸ್ಥರು ರಾಮಕೃಷ್ಣಪ್ಪ ಬಲಾಡ್ಯರ ವಿರುದ್ದ ಹತ್ತಾರು ವರ್ಷಗಳಿಂದ ಹೋರಾಟ ಮಾಡಿ ಜೈಲಿನ ವನವಾಸ ಮಾಡಿ ಸತತ ಹೋರಾಟದ ಪ್ರತಿಪಲವಾಗಿ 65 ಎಕರೆ ಸರ್ಕಾರಿ ಗೋಮಾಳ ಕುರಿಗಾಯಿಗಳಿಗಾಗಿ ಹಿಂದಿನ ತಹಸೀಲ್ದಾರ್ ಪ್ರಮೀಣ್ ರವರು ನಾಮಫಲಕ ಅಳವಡಿಸಿದರೂ ಊರಿನ ಕೆಲವು ಬಲಾಡ್ಯರು ತಮ್ಮ ಪ್ರಾಭಲ್ಯವನ್ನು ಉಪಯೋಗಿಸಿ ಕುರಿಗಾಯಿಗಳಿಗಾಗಿ ಮೀಸಲಿಟ್ಟಿರುವ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅದಿಕಾರಿಗಳು ಹಾಗೂ ದರಕಾಸ್ತು ಕಮಿಟಿ ಮುಖಾಂತರ ಕುರಿಗಾಯಿಗಳ ಜಮೀನನ್ನು ಕಬಳಿಸಲು ಮುಂದಾದರೆ ಕುರಿಗಳ ಸಮೇತ ಸಾವಿರಾರು ಬಡ ಕೂಲಿಕಾರ್ಮಿಕರು ಸಾಮೂಹಿಕ ಆತ್ಮಹತ್ಯ ಜಿಲ್ಲಾಡಳಿತದ ಮುಂದೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಭೂಮಿಗೆ ಬಂಗಾರ ಬೆಲೆ ಬಂದಿದ್ದೇ ಸರ್ಕಾರಿ ಸಾವಿರಾರು ಎಕರೆ ಜಮೀನು ರಾತ್ರೋರಾತ್ರಿ ಕಂದಾಯ ಸರ್ವೆ ನೋಂದಣಿ ಅಧಿಕಾರಿಗಳ ಭ್ರಷ್ಟಾಚಾರದಿಂದ ಭೂ ಮಾಪಿಯ ಪಾಲಾಗಿದೆ. ಪ್ರತಿ ಹಳ್ಳಿಯಲ್ಲೂ ಕುರಿಗಾಯಿಗಳಿಗೆ ಹಾಗೂ ಅಭಿವೃದ್ದಿಕಾರಿಗಳಿಗೆ ವರ್ಷಾನುಘಟ್ಟಲೆ ಹುಡುಕಿದರೂ ಅಂಗೈ ಅಗಲ ಜಮೀನು ಅಧಿಕಾರಿಗಳಿಗೆ ಸಿಗುವುದಿಲ್ಲ. ಆದರೆ ರಾತ್ರೋರಾತ್ರಿ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಪಿಯರವರು ಮಂಜೂರು ಮಾಡುತ್ತಿರುವ ಅವ್ಯಸ್ಥೆಯಲ್ಲಿ 65 ಎಕರೆ ಕುರಿಗಾಯಿಗಳಿಗಾಗಿ ಮೀಸಲಿಟ್ಟಿರುವ ಗ್ರಾಮದ ಕುರಿಗಾಯಿಗಳ ಹೋರಾಟಕ್ಕೆ ನಾವು ಸಹ ಬೆಂಬಲವಾಗಿ ನಿಂತು ಮೀಸಲಿಟ್ಟಿರುವ ಜಮೀನನ್ನು ಬೇರೆ ಯಾರಿಗೂ ಮಂಜೂರು ಮಾಡಬಾgದೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹರವರು ಸದರಿ ಜಮೀನನ್ನು ಮಂಜೂರು ಮಾಡದಂತೆ ಯಾವುದೇ ಅರ್ಜಿ ಬಂದರೂ ತಿರಸೃತ ಮಾಡುವಂತೆ ತಹಶೀಲ್ದಾರ್‍ರವರಿಗೆ ಸೂಚನೆ ನೀಡುವ ಭರವಸೆ ನೀಡಿದರು

ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ನಳಿನಿಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ರಾಮಮೂರ್ತಿ ಪದ್ಮಘಟ್ಟ ಧರ್ಮ ನಂಗಲಿ ನಾಗೇಶ್, ಹಸಿರುಸೇನೆ ತಾ.ಅ.ವೇಣು, ಕೇಶವ, ನವೀನ್ ಪುತ್ತೇರಿರಾಜು, ಅಣ್ಣಹಳ್ಳಿ ನಾಗರಾಜ್, ಕೋಲಾರ ತಾಲ್ಲೂಕು ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ, ಬಂಗವಾದಿ ನಾಗರಾಜಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ, ಹರೀಶ್, ರಾಮಸಾಗರ ವೇಣುಗೋಪಾಲ್, ಪಾರಂಡಹಳ್ಳಿ ಮಂಜುನಾಥ, ಸುರೇಶ್‍ಬಾಬು, ಚಂದ್ರಪ್ಪ, ಮರಗಲ್ ಮುನಿಯಪ್ಪ, ಟಿ.ಕುರುಬರಹಳ್ಳಿ ಗ್ರಾಮಸ್ಥರು ಇದ್ದರು