ಹೊಡೆಯುತ್ತೇವೆ ಬಡಿಯುತ್ತೇವೆ ಸ್ವಾಮೀಜಿಗಳ ಸಂದೇಶ ! ಇದು ಯಾವ ಮಾದರಿಯ ಸ್ವಾಮೀಜಿಗಳು !?

JANANUDI.COM NETWORK


ಮಂಡ್ಯ: ನಮ್ಮವರ ಒಬ್ಬನನ್ನು ಅವರು ಹತ್ಯೆಗೈದಿದ್ದಾರೆ. ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ ಎಂದು ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂತಹ ಕೇಳಿಕೆ ಸಂದೇಶ ನೀಡಿರುವ ಸ್ವಾಮೀಜಿಗಳನ್ನು ಸ್ವಾಮೀಜಿಗಳಂತಹ ಕರೆಯಬಹುದೇ?
ಕಾವೇರಿ ನದಿಯಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಬಳಿಕ ಮಾತನಾಡಿದ ಅವರು, ಗಡಿಯ ವಿಚಾರದಲ್ಲಿ ಪ್ರಧಾನಿ ಮೋದಿ ನಮ್ಮ ಸೈನಿಕರಿಗೆ ಹೇಳಿದ್ದರು. ಇದನ್ನೆ ದುರುಪಯೋಗ ಪಡೆದುಕೊಂಡು, ಈ ಮಾತನ್ನೆ ನಾನು ಗಡಿಯ ಒಳಗಿನ ವಿಚಾರಕ್ಕೆ ಇದನ್ನು ಅನ್ವಯಿಸಿಕೊಳ್ಳುತ್ತಿದ್ದೇನೆ ಎಂದು ಒಬ್ಬರಿಗೆ 10 ಜನರನ್ನು ಹೊಡೆಯುತ್ತೇವೆ. ನಾವು ಯಾಕೆ ಹೊಡೆಯಬಾರದು? ಇನ್ನೊಂದು ಇಂತಹ ಪ್ರಕರಣ ನಡೆದರೂ ಹಿಂದೂ ಗೋಪುರ ಬಿಟ್ಟು, ಇನ್ಯಾವ ಗೋಪುರ ಇರುವುದಿಲ್ಲ. ನಮ್ಮ ಕಪಿ ಸೈನ್ಯ ಎಲ್ಲವನ್ನು ಬೀಳುಸುತ್ತವೆ ನೆನಪಿರಲಿ. ನಮ್ಮ ಬಳಿಯು ವಾನರ ಸೈನ್ಯ ಇದೆ. ಆ ಸೈನ್ಯ ಏನು ಮಾಡುತ್ತೆ ನೋಡಿ ಎಂದು ಅವರು ಎಚ್ಚರಿಕೆ ನೀಡಿದ್ದು ಸಮಾಜದ ಶಾಂತಿ ಭಂಗದ ಸಂದೇಶವನ್ನು ನೀಡಿದ್ದಾರೆ.
ಇವರನ್ನು ಸ್ವಾಮೀಜಿಗಳ ಮರ್ಯಾದೆ ಗೌರವ ಪಡೆಯಲು ಅರ್ಹರೆ? ಅಂದ ಮಾತ್ರಕ್ಕೆ ಹರ್ಷನ ಹತ್ಯೆ ಬಗ್ಗೆ ದುಖಿತರೆ, ಆದರೆ ಅವನನ್ನು ಕೊಲೆ ಮಾಡಿದವರು ಕೊಲೆಕಡುಕರು, ಸ್ವಾಮೀಜಿಗಳೂ ಕೂಡ ಕೊಲೆಕಡುಕರಂತೆ ಮಾತನಾಡಿದರೆ, ಸ್ವಾಮೀಜಿಗಳ ಮರ್ಯಾದೆಗೆ ಕುಂದು ಬರುವುದು.
ಸ್ವಾಮೀಜಿಗಳು, ಗುರುಗಳು, ಯಾಜಕರು ಎಲ್ಲರೂ, ಎಲ್ಲಾ ಸಮಾಜದ ದೈವ ಸ್ವರೂಪದವಾರಾಗಿದ್ದಾರೆ, ಎಲ್ಲಾ ಸ್ವಾಮಿಗಳು ಗುರುಗಳು, ಯಾಜಕರು ಎಲ್ಲಾ ಸಮುದಾಯದ, ಸಮಾಜಾದ ಆದರ್ಶವಾಗಿರಬೇಕಾದುದು, ಇಂದಿನ ಅವಶ್ಯಕತೆ.
ಕಡಿಮೆ ಪಕ್ಷ ಹರ್ಷನ ತಂಗಿಗೆ ಇದ್ದಷ್ಟು ವೀವೇಚನೆ, ಸ್ವರ್ಗಿಯ ವಿಚಾರ ಧಾರೆ ಈ ಸ್ವಾಮಿಗಿಲ್ಲ. ಇಂತಹ ಸ್ವಾಮಿಗಳನ್ನು ಪಡೆದ ನಾವೂ ಎಷ್ಟು ಧನ್ಯರೆಂದು ನಾವು ನಮಗೆ ಕೇಳಿಕೊಳ್ಳಬೇಕಾದ ಅನಿವಾರ್ಯತೆ ನಮಗಿದೆ.