

ಹಲವಾರು ವರ್ಷಗಳಿಂದ ಆಕ್ರಮ ಟೋಲ್ ಗೇಟನ್ನು ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಅದನ್ನು ಕಾನೂನು ಬಾಹಿರ ಅಂತಾ ಹೇಳಿದ್ರೂ ಆ ಟೋಲ್ ಗೇಟನ್ನು ಆಡಳಿತ ಯಂತ್ರ ತೆರವು ಗೊಳಿಸುವ ಪ್ರಯತ್ನ ಮಾಡದಿದ್ದರಿಂದ, ಕರಾವಳಿಯ ಜನರು ಜನಪ್ರತಿನಿಧಿಗಳ ವಿರುದ್ಧ ಇಂದು ಸಮಾನ ಮನಸ್ಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು..
ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರಿಂದ ಜನರ ಆಕ್ರೋಶ, ಕಟ್ಟೆಯೊಡೆದು ಸರ್ಕಾರದ ವಿರುದ್ಧ ಘೋಷಣೆ, ಟೋಲ್ ಗೆ ಮುತ್ತಿಗೆ ಹಾಕಲಾಯಿತು. ಹೌದು. ಮಂಗಳೂರು ನಗರದ ಎನ್ ಐಟಿಕೆ ಬಳಿಯಿರುವ ಸುರತ್ಕಲ್ ಟೋಲ್ ಗೇಟ್ ತೆರವು ನಿರ್ಣಾಯಕ ಕಾರ್ಯಾಚರಣೆಯ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಾ ಇದ್ದ ವೇಳೆ ಪ್ರತಿಭಟನಾಕಾರರು ಏಕಾಏಕಿ ಟೋಲ್ ಗೇಟ್ನತ್ತ ಮುತ್ತಿಗೆ ಹಾಕಿದ್ರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಇಟ್ಟು ಆಕ್ರೋಶಿತ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಆದರೆ ಸಾವಿರಾರು ಪ್ರತಿಭಟನಾಕಾರರು ಏಕಾಏಕಿ ಬ್ಯಾರಿಕೇಡ್ಗಳನ್ನು ತಳ್ಳಿಕೊಂಡು ಟೋಲ್ ನತ್ತ ಓಡಿ ಹೋಗಿ ಮುತ್ತಿಗೆ ಹಾಕಿದ ಘಟನೆ ನಡೆಯ್ತು.
ಸರಕಾರ ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಿದ್ದರೂ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಟೋಲ್ನತ್ತ ನುಗ್ಗಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ಸುರತ್ಕಲ್ ಟೋಲ್ ತೆರವನ್ನು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಇಂದು ಟೋಲ್ ವಿರೋಧಿ ಸಮಿತಿ ನಿರ್ಣಾಯಕ ಹೋರಾಟವನ್ನು ಕೈಗೊಂಡಿತ್ತು. ಕೆಲ ಸಮಯದದ ತನಕ ಟೋಲ್ ಗೇಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ಪೊಲೀಸರು ಟೋಲ್ ಗೇಟ್‌ನಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.




