ಕೋಲಾರ:- ಎಐಸಿಸಿ ಮುಖಂಡ ರಾಹುಲ್ಗಾಂಧಿ ಅವರಿಗೆ ಮೋದಿ ಉಪನಾಮದ ಶಿಕ್ಷೆ ಪ್ರಕರಣಲ್ಲಿ ಸುಪ್ರೀಂ ಕೋರ್ಟ್ನಿಂದ ರಿಲೀಫ್ ಸಿಕ್ಕಿರುವ ಹಿನ್ನಲೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಯದೇವ್, ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ, ಲೋಕಸಭಾ ಸದಸ್ಯತ್ವದಿಂದ ರಾಹುಲ್ಗಾಂಧಿ ಅವರನ್ನು ಅನರ್ಹಗೊಳಿಸಿದ್ದ ಕ್ರಮದ ವಿರುದ್ದ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದು, ದೇಶದಲ್ಲಿನ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಆದ ಸೋಲಾಗಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ ಜನಪರ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ನಡೆಸಿದ ಕುತಂತ್ರಕ್ಕೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದೆ, ಯಾವುದೇ ತಪ್ಪು ಮಾಡದಿದ್ದರೂ ಶಿಕ್ಷೆಗೆ ಒಳಗಾಗಿದ್ದ ರಾಹುಲ್ಗಾಂಧಿ ಮತ್ತೆ ಲೋಕಸಭೆ ಪ್ರವೇಶಿಸುತ್ತಿದ್ದು, ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ರಾಜ್ಯದಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ. ಅದೇ ಮಾದರಿಯಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದ ಅವರು ರಾಹುಲ್ಗಾಂಧಿಯವರ ಜನಪರ ಧ್ವನಿಯನ್ನು ಅಡಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿವಿಧ ವಿಭಾಗದ ಪದಾಧಿಕಾರಿಗಳಾದ ಮುಖಂಡರಾದ ಸಾಧಿಕ್ಪಾಷ,ಅತಾವುಲ್ಲಾ, ಯಲ್ಲಪ್ಪ, ರತ್ನಮ್ಮ, ವೆಂಕಟಪತಿ, ಮಂಜುನಾಥ್, ಸವಿತಾ ಸಮಾಜದ ಮಂಜುನಾಥ , ತ್ಯಾಗರಾಜ್, ಸಲಾಲುದ್ದೀನ್ ಬಾಬು, ಹಾರೋಹಳ್ಳಿ ನಾರಾಯಣಸ್ವಾಮಿ, ಹರಿ,ಸಂಪತ್ ಕುಮಾರ್, ಎಜಾಜ್, ಗಂಗಮ್ಮನಪಾಳ್ಯದ ರಾಮಯ್ಯ,ನಾರಾಯಣಸ್ವಾಮಿ,ಅಯೂಬ್, ಬಾಬಾಜಾನ್ ಮತ್ತಿತರರು ಹಾಜರಿದ್ದರು.