ಶ್ರೀನಿವಾಸಪುರ-ಮೇ-2, ರೈತ ಪ್ರಣಾಳಿಕೆಗೆ ಬದ್ದವಾಗಿರುವ ಜೊತೆಗೆ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟ ಮಾಡುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಗುಂಜೂರು ಆರ್.ಶ್ರೀನಿವಾಸರೆಡ್ಡಿಗೆ ರೈತ ಸಂಘದ ಬೆಂಬಲ ನೀಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಮ್ಮ ಮತ ಪಡೆದು ನಮ್ಮ ಮಕ್ಕಳಿಗೆ ಉದ್ಯೋಗ ಸ್ಥಳೀಯವಾಗಿ ಸೃಷ್ಟಿ ಮಾಡುವಲ್ಲಿ ರೆಡ್ಡಿ-ಸ್ವಾಮಿ ರವರು ವಿಫಲವಾಗಿದ್ದಾರೆ. ಪ್ರತಿಭಾವಂತ ಯುವಕರು ಉದ್ಯೋಗವನ್ನು ಅರಿಸಿ ಬೆಂಗಳೂರಿಗೆ ವಲಸೆ ಹೋಗವ ಜೊತೆಗೆ ರೈತರ ರಕ್ತ ಹೀರುವ ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಸಭೆಯಲ್ಲಿ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ಪ್ರಗತಿ ಪರ ರೈತ ಬಂಗವಾದಿ ನಾಗರಾಜಗೌಡ ತೋಟದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹತ್ತಾರು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸ್ವಾಮಿ-ರೆಡ್ಡಿ ರವರ ಪ್ರತಿಷ್ಠೆಯ ಕ್ಷೇತ್ರವಾಗಿದ್ದರೂ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ. ಇಬ್ಬರ ಹಗ್ಗಾಜಗ್ಗಾಟದಲ್ಲಿ ರೈತರ ಆಶಾಕಿರಣ ಅಭಿವೃದ್ದಿಯ ಹರಿಕಾರ ಗುಂಜೂರು ಶ್ರೀನಿವಾಸರೆಡ್ಡಿ ರವರ ಆಗಮನ ಕ್ಷೇತ್ರದ ಜನರಲ್ಲಿ ಅಭಿವೃದ್ದಿಯ ಆಶಾಕಿರಣ ಕಾಣುತ್ತಿದ್ದಾರೆಂದು ಸಭೆಯಲ್ಲಿ ಆಶೆಯ ವ್ಯಕ್ತಪಡಿಸಿದರು.
ಮಾವಿನ ಮಡಿಲು ಇಡಿ ಪ್ರಪಂಚಕ್ಕೆ ಮಾವನ್ನು ಕೊಡುವ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುದು ಮರುಚಿಕೆಯಾಗಿದೆ. ರೈತರ ಜೀವನಾಡಿಯಾಗಿರುವ ಟೆಮೊಟೊ, ಮಾವು, ಮಾರುಕಟ್ಟೆ ಅಭಿವೃದ್ದಿ ಇಲ್ಲದೆ ಬದುಕಿನ ಜೀವ ಹರಿಸಿಬರುವ ಸಾವಿರಾರು ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಅನಾರೋಗ್ಯ ಪೀಡಿತ ಮಾರುಕಟ್ಟೆಯಾಗಿ ಮಾರ್ಪಟ್ಟು, ಸಮರ್ಪಕವಾದ ಮಾವು, ವಿಲೆವಾರಿ ಇಲ್ಲದೆ, ರಸ್ತೆ ರಸ್ತೆಯಲ್ಲೂ ಸುರಿದು ಅನಾರೋಗ್ಯ ಹರಡುವ ಜೊತೆಗೆ ಮಳೆ ಬಿದ್ದರೆ ಕೆರೆ ಕುಂಟೆಯಾಗಿ ಮಾರ್ಪಾಡುವ ಮಾರುಕಟ್ಟೆ ಹಾಗೂ ಗ್ರಾಮೀನ ಪ್ರದೇಶದ ಅಬಿವೃದ್ದಿಗೆ ಆದ್ಯತೆ ನೀಡುವ ಅಭ್ಯರ್ಥಿಗೆ ಹೆಚ್ಚಿನ ಬಹುಮತನೀಡುವ ಮುಖಾಂತರ ವಿಧಾನಸೌಧಕ್ಕೆ ಆಯ್ಕೆ ಮಾಡುವಂತೆ ಸಭೆಯಲ್ಲಿ ಕ್ಷೇತ್ರದ ಜನರನ್ನು ಮನವಿ ಮಾಡಿದರು.
ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ ಹಾಗೂ ಟೆಮೋಟೋ ಹಾಗೂ ಮಾವು ಬೆಳೆಗಾರರಿಗೆ ಅನುಕೂಲಕರವಾಗುವ ಮಾವು ಸಂಸ್ಕರಣ ಘಟಕ ಕೃಷಿ ಆದಾರಿತ ಕೈಗಾರಿಕೆಗಳು ಸರ್ಕಾರಿ ಆಸ್ಪತ್ರೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ ನೀಡಿ ಕ್ಷೇತ್ರದ ಅಭಿವೃದ್ದಿಗೆ ಮನೆ ಮಗನಾಗಿ ನಿಲ್ಲುವ ಗುಂಜೂರು ಆರ್.ಶ್ರೀನಿವಾಸರೆಡ್ಡಿ ರವರಿಗೆ ಈ ಭಾರಿ ರೈತ ಸಂಘದಿಂದ ಬೆಂಬಲ ಸೂಚಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಅಭ್ಯರ್ಥಿಗೆ ರೈತ ಸಂಘದ ಮತ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಆಲವಾಟ ಶಿವು, ಸಹದೇವಣ್ಣ, ಶೇಕ್ ಷಪಿವುಲ್ಲಾ, ರತ್ನಮ್ಮ, ಭಾಗ್ಯಮ್ಮ, ಶೈಲಜ, ರಾಮಕ್ಕ, ವೆಂಕಟಮ್ಮ, ಇನ್ನು ಮುಂತಾದವರು ಇದ್ದರು.