ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಜಲಜೀವನ್ ಮಿಷನ್ ದೇಶದ್ಯಾಂತ ಜಾರಿಯಾಗಿದ್ದು ಈ ಯೋಜನೆಯು ೨೦೨೪ ಕ್ಕೆ ಪರ‍್ಣಗೊಳ್ಳಲಿದ್ದು , ೨೦೨೪ ರೊಳಗೆ ಪ್ರತಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ , ಪ್ರಧಾನ ಕರ‍್ಯರ‍್ಶಿಗಳಾದ ಎಲ್.ಕೆ. ಅತೀಕ್ ಅವರು ತಿಳಿಸಿದರು . ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಲ ಜೀವನ್ ಮಿಷನ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಹಳ್ಳಿಗೆ ಬೇಟಿ ನೀಡಿ ಜಲ ಮೂಲಗಳನ್ನು ಗುರುತಿಸಿಕೊಂಡು , ಪ್ರತಿ ಕುಟುಂಬಕ್ಕೆ ಕುಡಿಯುವ ನೀರಿನ ಸಂರ‍್ಕ ಕಲ್ಪಿಸಲು ನಲ್ಲಿಗಳನ್ನು ಆಳವಡಿಸಲು ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಲ್ಯಾಬೋರೇಟರಿಗಳನ್ನು ಪರೀಕ್ಷಿಸಲು ಗ್ರಾಮ ಪಂಚಾಯಿತಿ ವತಿಯಿಂದ ವಾಟರ್‌ಮೆನ್‌ಗಳಿಗೆ ತರಬೇತಿ ನೀಡಬೇಕು . ವಾಟರ್‌ಮನ್‌ಗಳಿಗೆ ೬ ಪ್ಯಾರಮೀಟರ್‌ಗಳನ್ನು ಪರೀಕ್ಷಿಸಲು ಬರಬೇಕು . ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಬರುತ್ತಿರುವುದರಿಂದ ನೀರನ್ನು ಆಗಾಗಲೇ ಪರೀಕ್ಷೆ ಮಾಡಬೇಕು . ನರೇಗಾ ಯೋಜನೆಯಡಿ ಕಿಚನ್ ಗರ‍್ಡನ್ , ಆಟದ ಮೈದಾನ , ಶಾಲಾ ಕಾಂಪೌಂಡ್‌ಗಳನ್ನು ನರ‍್ಮಿಸಿ , ಪರ‍್ಕ್‌ಗಳ ನರ‍್ಮಾಣಕ್ಕೆ ಮಿತ ವೆಚ್ಚವನ್ನು ಮಾಡಿ . ಹಸಿರು ಗಿಡಗಳನ್ನು ಹೆಚ್ಚಾಗಿ ಬೆಳಸಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು . ಜಿಲ್ಲೆಯ ೧೫೬ ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯಗಳಲ್ಲಿ ಮಕ್ಕಳು ಹಾಗೂ ಸರ‍್ವಜನಿಕರು ಓದಲು ಉತ್ತಮ ಅವಕಾಶಗಳನ್ನು ಕಲ್ಪಿಸಿ , ಪ್ರತಿ ಗ್ರಂಥಾಲಯಕ್ಕೆ ಓದುವ ಕೋಣೆಗಳನ್ನು ಒದಗಿಸಿ . ಗ್ರಂಥಾಲಯಗಳಲ್ಲಿ ಸ್ರ‍್ಧಾತ್ಮಕ ಪರೀಕ್ಷೆಗೆ ಓದುವ ಪುಸ್ತಕಗಳನ್ನು ಒದಗಿಸಿ ಎಂದರು .
ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ ಅವರು ಮಾತನಾಡಿ , ಜಿಲ್ಲೆಯ ೧೫೬ ಗ್ರಾಮ ಪಂಚಾಯಿತಿಗಳಿಗೆ ವೆಸ್ಟ ಮ್ಯಾನೆಂಜಮೆಂಟ್ ನರ‍್ವಹಣೆಗೆ ಜಾಗ ನೀಡಲಾಗಿದೆ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು . ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾಧಿಕಾರಿಗಳಾದ ಉಕೇಶ್ ಕುಮಾರ್ , ಜಿಲ್ಲಾ ಪಂಚಾಯತ್ ಉಪ ಕರ‍್ಯದಶಿಗಳಾದ ಸಂಜೀವಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕರ‍್ಯನರ‍್ವಹಣಾಧಿಕಾರಿಗಳು ಉಪಸ್ಥಿತರಿದ್ದರು .