ಕುಂದಾಪುರದಲ್ಲಿ ವೈಸಿಎಸ್ ಮತ್ತು ಐಸಿವೈಎಮ್ ಇವರಿಂದ ರಾಷ್ಟ್ರೀಯ ಯುವ ಯವತಿಯರ ಭಾನುವಾರ

JANANUDI.COM NETWORK


ಕುಂದಾಪುರ,ಅ.8.ಕುಂದಾಪುರ ಹೋಲಿ ರೋಜರಿ ಚರ್ಚಿನ ವೈಸಿಎಸ್ ಮತ್ತು ಐಸಿವೈಎಮ್ ಯವ ಸಂಘಟನೆಗಳು, ರಾಷ್ಟ್ರೀಯ ಯುವ ಯುವತಿಯ ಭಾನುವಾರ ದಿನವನ್ನು ಆಚರಿಸಿದರು.
ವೈಸಿಎಸ್ ಮತ್ತು ಐಸಿವೈಎಮ್ ಎರಡು ಸಂಘಟನೆಗಳು ಕೂಡಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ ಬಲಿದಾನವನ್ನು ಅರ್ಪಿಸಿದರು, ಬಲಿದಾನದ ಪೂಜಾ ವಿಧಿ ವಿಧಾನ ಮತ್ತು ಗಾಯನದ ಪಂಗಡದ ನೇತ್ರತವನ್ನ್ವು ತಾವೇ ವಹಿಸಿಕೊಂಡು ನಿರ್ವಹಿಸಿದರು.
ಧರ್ಮಗುರು ವಂ|ವಿಜಯ್ ಡಿಸೋಜಾ ‘ನಮ್ಮ ಯುವಜನರು ಬುದ್ದಿವಂತರು, ಅನೇಕ ವಿಷಯಗಳು ಅವರಿಗೆ ತಿಳಿದಿರುತ್ತವೆ. ಆದರೆ ಅವರಿಗೆ ಅನುಭವ ಇಲ್ಲ ಅದರ ಕೊರತೆ ಇದೆ, ನಾವು ಹಿರಿಯರು ಅನುಭವದ ಜೊತೆ ಅವರಿಗೆ ಪೆÇ್ರೀತ್ಸಾಹ, ಸಹಕಾರ ನೀಡಬೇಕು, ಯುವ ಜನರಲ್ಲಿ ಹೊಸತನವಿದೆ, ಹೊಸತನ ನಮ್ಮ ಸಮಾಜದ ಒಳಿತಿಗಾಗಿ ಬಳೊಸೋಣ’ ಎಂದು ಸಂದೇಶ ನೀಡಿದರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭಾಷಯ ಕೋರಿದರು. ಸಂಘಟನೇಯ ಮಾರ್ಗದರ್ಶಕರಾದ, ಶಾಂತಿ ಬಾರೆಟ್ಟೊ, ಶೈಲಾ ಡಿಆಲ್ಮೇಡಾ, ಜೆಸನ್ ಪಾಯ್ಸ್, ಪಾಲನ ಮಂಡಳಿ ಉಪಾಧ್ಯಕ್ಷರಾದ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು
.