JANANUDI.COM NETWORK
ಕುಂದಾಪುರ,ಎ.10: “ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಅದರಂತೆ ಯೇಸು ದೇವ ಪುತ್ರನಾಗಿ ಹುಟ್ಟಿ. ಆತನು ನೂತನವಾದ ಧರ್ಮಭೋದನೆ ಮಹತ್ಕಾರ್ಯಗಳನ್ನು ಮಾಡಿದ, ತಪ್ಪಿದಸ್ತರನ್ನು ಶಿಕ್ಷಿಸುವುದಲ್ಲ, ಕ್ಷಮೆ ನೀಡಬೇಕೆನ್ನುತ್ತಾ, ತನಗೆ ಶಿಲುಭೆ ಮರಣ ಪ್ರಾಪ್ತಿ ಮಾಡಿದವರನ್ನು ಕ್ಷಮಿಸಿದ, ಜನರು ಯೇಸುವಿನಪ್ರಭಾವಕ್ಕೆ ಒಳಗಾಗತೊಡಗಿದರು, ಯೇಸುವಿನ ಜನಪ್ರಿಯತೆ ಅಂದಿನ ಧರ್ಮ ನೇತಾರರ ಕೆಂಗೆಣ್ಣಿಗೆ ಗುರಿಯಾಗಿ ತಮ್ಮ ಅಧಿಕಾರಕ್ಕೆ ಯೇಸು ತೊಡಕಾಗಬಹುದೆಂದು, ಆತನ ಮೇಲೆ ಸುಳ್ಳು ಆರೋಪ ಹೊರಿಸಿ ಶಿಲುಭೆ ಮರಣವನ್ನು ನೀಡಿದರು. ಆದರೆ ಯೇಸುವಿನ ನಿಂದಕರು ಏಣಿಸದಂತೆ ಆಗಲಿಲ್ಲ, ಬದಲಾಗಿ ಲೋಕದ ಜನರು ಯೇಸುವಿನ ಮರಣದ ನಂತರ ಅಸಂಖ್ಯಾತ ಜನರು ಯೇಸುವಿಗೆ ನಂಬತೊಡಗಿದರು” ಎಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ|ಮ್ಯಾಕ್ಷಿಮ್ ಡಿಸೋಜಾ ಸಂದೇಶ ನೀಡಿದರು.
ಅವರು ಜಿಲ್ಲೆಯ ಅತ್ಯಂತ ಹಿರಿಯ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದ ಬಲಿದಾನ ಅರ್ಪಿಸಿ ಪ್ರವಚನ ನೀಡಿದರು. ಅದಕ್ಕೂ ಮೊದಲು ಅವರು ಗರಿಗಳನ್ನು ಆಶಿರ್ವಾದಿಸುವ ಸಂಸ್ಕಾರ ನೇರವೇರಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗರಿಗಳ ಭಾನುವಾರದ ಸಂಸ್ಕಾರದಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂಸ್ಕಾರದಲ್ಲಿ ಭಾಗವಹಿಸಿದರು. ಕೊರೊನಾದಿಂದ ಸ್ವಲ್ಪ ಚೇತರಿಕೊಂಡ ಭಕ್ತಾಧಿಗಳು ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.