JANANUDI.COM NETWORK
ಕುಂದಾಪುರ, ನ.21: “ನಾವೆಲ್ಲ ಸಹೋದರರಂತೆ ಬಾಳಿದರೆ ಪರಮ್ತಾಮನಿಗೆ ಸಂತೋಷ, ಅದರಂತೆ ನಾವು ಬಾಳಬೇಕು, ನಾವು ಸಹೋದರರಂತೆ ಬಾಳ ಬೇಕನ್ನುವುದೆ ಪರಮಾತ್ಮನ ಇಚ್ಚೆ” ಎಂದು ಉಡುಪಿ ವಲಯ ಪ್ರಧಾನರರಾದ ವಂ| ಫಾ| ಚಾಲ್ರ್ಸ್ ಮಿನೇಜೆಸ್ ಸಂದೇಶ ನೀಡಿದರು.
ಅವರು ಉಡುಪಿ ಚರ್ಚಿನ ಅತ್ಯಂತ ಪ್ರಾಚೀನ ಇಗರ್ಜಿಯಾದ ರೋಸರಿ ಚರ್ಚಿನ ತೆರಾಲಿ ಪ್ರಯುಕ್ತ ನಡೆಯುವ ಭ್ರಾತ್ವವದ ಭಾನುವಾರ ಆಚರಣೆಯ ಸಂದರ್ಭದಂದು ಪ್ರಧಾನ ಧರ್ಮಗುರುಗಳಾಗಿ ಬಲಿ ಪೂಜೆ ಮತ್ತು ಪರಮ ಪ್ರಸಾದ ಆರಾಧನೆಯನ್ನು ಅರ್ಪಿಸಿ ಸಂದೇಶ ನೀಡಿ “ಪ್ರವಾಸದಲ್ಲಿ ನಮಗೆಲ್ಲಾ ಬೇಕಾಗಿರುವ ಸರಾಂಬುಜಾಮುಗಳ ಬ್ಯಾಗುಗಳನ್ನು ತೆಗೆದುಕೊಂಡು ಪ್ರವಾಸಕ್ಕೆ ಹೊರಟು, ಪ್ರವಾಸಕ್ಕೆ ಪಡೆದ ಟಿಕೇಟುಗಳು ಇರುವ ಬ್ಯಾಗ್‍ನ್ನೆ ಬಿಟ್ಟು ಹೊರಟರೆ, ಪ್ರವಾಸ ಮಾಡಲಾದಿತೆ, ಹಾಗೆ ದೇವರ ವಾಕ್ಯವಿರುವ ಪುಸ್ತಕದ ತಿರುಳನ್ನು ಬಿಟ್ಟು ನಾವು ಬಾಳಿದರೆ ಸ್ವರ್ಗ ಸಿಗುವುದಿಲ್ಲಾ. ನಮ್ಮ ಅಂತಸ್ತು ದೊಡ್ಡಸ್ತಿಕೆ ದೇವರಿಗೆ ಮುಖ್ಯವಲ್ಲಾ, ಪರೋಪಾಕಾರ, ಪ್ರಮಾಣಿಕತೆ, ಸತ್ಯ, ಕರುಣೆ ಇವುಗಳೇ ದೇವರಿಗೆ ಸಲ್ಲುವುದು’ ಎಂದು ಅವರು ತಿಳಿಸಿದರು.
ಈ ವರ್ಷ ಕೊರೊನಾ ಪರಿಣಾಮದಿಂದ ಚರ್ಚಿನಿಂದ ನಗರದದಲ್ಲಿ ಮಾಡುವ ವಿಜ್ರಂಭರಣೆಯ ಮೆರವಣಿಗೆಯನ್ನು ರದ್ದು ಪಡಿಸಿ, ಸರಳ ರೀತಿಯಲ್ಲಿ ತೆರಾಲಿ ಹಬ್ಬ ಇದೆಯೆಂದು ಸಾರುವ ಭ್ರಾತ್ವವದ ಭಾನುವಾರವನ್ನು ಅಚರಿಸಲಾಯಿತು. ಈ ಆಚರಣ ವಿಧಿಯಲ್ಲಿ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ| ಫಾ|ಸ್ಟ್ಯಾನಿ ತಾವ್ರೊ ಭಾಗವಹಿಸಿ ವಂದಿಸಿದರು. ಸಹಾಯಕ ಧರ್ಮಗುರು ವಂ|ಫಾ ವಿಜಯ್ ಡಿಸೋಜಾ ಆಚರಣೆಯಲ್ಲಿ ಭಾಗವಹಿಸಿದರು. ಕಟ್ಕರೆಯ ಧರ್ಮಗುರು ವಂ|ಫಾ|ಆಲ್ವಿನ್ ಸಿಕ್ವೇರಾ ಗಾಯನ ಮಂಡಳಿಗೆ ನಿರ್ದೇಶನ ನೀಡಿದರು.