

ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಕೈಸ್ತ ಶಿಕ್ಷಣ ಆಯೋಗದ ನೇತೃತ್ವದಲ್ಲಿ ಚರ್ಚಿನ ಮಕ್ಕಳಿಗೆ ನಾಲ್ಕು ದಿನಗಳ.
ಬೇಸಿಗೆ ರಜೆಯ ಆಧ್ಯಾತ್ಮಿಕ ತರಬೇತಿ ಶಿಬಿರವನ್ನು ಏಪ್ರಿಲ್ 21 ರಂದು ಬೆಳೆಗ್ಗೆ 8 ಗಂಟೆಗೆ ಚರ್ಚಿನ ಧರ್ಮ ಗುರುಗಳಾದ
ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಬಲಿಪೂಜೆಯೊಂದಿಗೆ ಆರಂಭಿಸಿದರು.
ಮೊದಲನೆಯ ದಿನ, ಏಪ್ರಿಲ್ 21 ರಂದು ಸುರತ್ಕಲ್, ಸೇಕ್ರೆಡ್ ಹಾರ್ಟ್ ಚರ್ಚನ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾ.
ರಿಚಾರ್ಡ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು, ಬೈಬಲ್ ಆಧಾರಿತ ಕೆಲವು ಗುಂಪು ಚಟುವಟಿಕೆಗಳಲ್ಲಿ, ಏಕಪಾತ್ರ:
ಅಭಿನಯ ಹಾಗೂ ರಸಪ್ರಶ್ನೆಯನ್ನು ನಡೆಸಿ ಮಕ್ಕಳನ್ನು ಕ್ರೀಯಾಶೀಲರನ್ನಾಗಿಸಿದರು.
ಎರಡನೆಯ ದಿನ, ಉಡುಪಿ ಧರ್ಮ ಪ್ರಾಂತ್ಯದ, ಧರ್ಮ ಸಭೆ ಮೂಲ ಸಮುದಾಯ ಆಯೋಗದ ನಿರ್ದೇಶಕರಾದ ವಂದನೀಯ ಫಾ.
ಹೆರಾಲ್ಡ್ ಪಿರೇರಾ ಹಾಜರಿದ್ದು, ಧರ್ಮ ಸಭೆಯ ಮೂಲ ಸಮುದಾಯದ ಬಗ್ಗೆ ಮಾಹಿತಿ ನೀಡಿ, ಗುಂಪು ಚಟುವಟಿಕೆ ನಡೆಸಿ,
ಸಭೆಯನ್ನು ಮಕ್ಕಳೇ ನಡೆಸಲು ತರಬೇತಿ ನೀಡಿದರು.
ಮೂರನೆಯ ದಿನ, ಚರ್ಚಿನ ಧರ್ಮ ಗುರುಗಳಾಗಿರುವ ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಮಕ್ಕಳಲ್ಲಿ ಅಡಗಿರುವ
ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣ ಗಳನ್ನು ಪಟ್ಟಿ ಮಾಡಲು ತಿಳಿಸಿದರು. ಮಕ್ಕಳು ತಮ್ಮ ಮನೆ,ಶಾಲೆ ಹಾಗೂ ಸಮಾಜದಲ್ಲಿ
ಎದುರಿಸುವ ಸಮಸ್ಯೆಗಳನ್ನು ಹಾಗೂ ಸಮಸ್ಯೆಗಳಿಗೆ ಪರಿಹಾರೊಪಾಯಗಳನ್ನು ಮಕ್ಕಳಿಂದಲೇ ಕಂಡು ಹಿಡಿಯುವಂತೆ ಮಾಡಿದರು.
ಕೊನೆಯ ದಿನವಾದ ಏಪ್ರಿಲ್ 25 ರಂದು, ಬಾಲ ಯೇಸುವಿನ ಪುಣ್ಯಕ್ಷೇತ್ರ ಬಿಕರ್ನ ಕಟ್ಟೆ, ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ.
ಮುಡಿಪು,ಇಲ್ಲಿ ಭೇಟಿ ನೀಡುವುದರ ಮೂಲಕ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.
ಈ ತರಭೇತಿ ಶಿಬಿರದಲ್ಲಿ ಚರ್ಚೆನ ಧರ್ಮಗುರುಗಳೊಂದಿಗೆ, ಭಾನುವಾರದಂದು ಕೈಸ್ತ ಶಿಕ್ಷಣ ಬೋಧಿಸುವ ಶಿಕ್ಷಕರು ಸಹಕರಿಸಿದರು.
ವಿದ್ಯಾರ್ಥಿಗಳು ವಿವಿಧ ಆಟೋಟ ಚಟುವಟಿಕೆಗಳನ್ನು ನಡೆಸಿ ಮಕ್ಕಳನ್ನು ರಂಜಿಸಿದರು.