ಕುಂದಾಪುರ ರೋಜರಿ ಚರ್ಚಿನಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶಿಬಿರ – ಶಿಬಿರದಲ್ಲಿ ಕಲಿತದ್ದು ನಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳಬೇಕು :ಫಾ|ಸ್ಟ್ಯಾನಿ ತಾವ್ರೊ

JANANUDI.COM NETWORK

ಕುಂದಾಪುರ, ಎ.19: ಸ್ಥಳೀಯ ಹೋಲಿ ರೋಜರಿ ಚರ್ಚ್ ವ್ಯಾಪ್ತಿಯ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳಿಗೆ ಬೇಸಿಗೆ ರಜೆ ಶಿಬಿರವನ್ನು ಎರ್ಪಡಿಸಲಾಗಿತ್ತು. ಈ ಶಿಬಿರವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ “ಶಿಬಿರಗಳಲ್ಲಿ ಸಾಕಷ್ಟು ಕಲಿಯಲಿಕ್ಕಿದೆ, ಧಾರ್ಮಿಕ, ಸಾಮಾಜಿಕ, ಮಾಧ್ಯಮ ಮತ್ತು ಹಲವಾರು ವಿಷಯಗಳಲ್ಲಿ ಶಿಬಿರ ನಡೆಯುತ್ತದೆ, ಈ ಶಿಬಿರದಲ್ಲಿ ಕಲಿತದ್ದು, ಇಲ್ಲಿಗೆ ಬಿಡುವುದಲ್ಲ, ನಿಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು” ಎಂದು ಆಶಿರ್ವದಿಸಿದರು.
ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಪ್ರಸ್ತಾವಿಕ ನುಡಿಗಳನ್ನಾಡಿ ‘ದೀಪವನ್ನು ಬೆಳಗಿಸದೆ ಅದು ಸುಮ್ಮನ್ನೆ ಇಟ್ಟರೆ ಅದರಿಂದ ಲಾಭವಿಲ್ಲ, ಆ ದೀಪವನ್ನು ಬೆಳಗಿಸಿದರೆ ದೀಪವು ನಮಗೆ ನೀಡುವುದು, ಹಾಗೇ ನಿಮ್ಮಲ್ಲಿ ಅನೇಕ ಪ್ರತಿಭೆಗಳಿವೆ ಅದು ಹೊರಹಮ್ಮಿದರೆ ಮಾತ್ರ ನೀವು ಏನೆಂದು ತಿಳಿಯುವುದು ಮಾತ್ರವಲ್ಲ, ಇದರಿಂದ ಇತರರಿಗೆ ಪ್ರಯೋಜನ ದೊರಕುವುದು. ಉಪ್ಪು ರುಚಿಗೆ ಬೆರೆಸಿದರೆ, ಅದು ಸ್ವಾಧಿಷ್ಟವಾಗುವುದು, ಅದರಂತೆ ಸಮಾಜಕ್ಕೆ ಬೆಳಕು ಮತ್ತು ಉಪ್ಪಿನ ಥರವಾಗಬೇಕು ಎಂದು, ಯೇಸು ಸ್ವಾಮಿ ತಿಳಿಸಿದ್ದಾರೆ.ಅದರಂತೆ ನಾವು ನಡೆದುಕೊಳ್ಳಣ” ಎಂದರು.


ಪ್ರಥಮ ವಿಷಯವಾಗಿ ಮಾಧ್ಯಮದ ಕುರಿತಿ ಉಡುಪಿ ಧರ್ಮಪ್ರಾಂತ್ಯದ ಪಿ.ಆರ್.ಒ. ಉಜ್ವಾಡ್ ಪತ್ರಿಕೆಯ ಮಾಜಿ ಸಂಪಾದಕರಾದ ವಂ|ಧರ್ಮಗುರು ಚೇತನ್ ಲೋಬೊ ಮಾಧ್ಯಮ ಉಪಯೋಗಿಸುವುದರಲ್ಲಿ ಇದೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ನಮಗೆ ಒಳ್ಳೆಯದು, ಕೆಟ್ಟ ರೀತಿಯಲ್ಲಿ ಉಪಯೋಗಿಸಿದರೆ ನಮಗೆ ಕೆಟ್ಟದು’ ಎಂದು ತೀಳಿ ಹೇಳಿದರು.


ಈ ಶಿಬಿರಕ್ಕೆ ಕುಂದಾಪುರ ಚರ್ಚ್ ಸ್ತ್ರೀ ಸಂಘಟನೆ ತಮ್ಮ ಕೈಯಾರ್ಥ ಶಿಬಿರಾರ್ಥಿಗಳಿಗೆ, ಊಟ ಮತ್ತು ಪಾನೀಯವನ್ನು ಸಿದ್ದ ಪಡಿಸುವ ಜವಾಬ್ದಾರಿ ನಿರ್ವಹಿಸಿದರು. ವೇದಿಕೆಯಲ್ಲಿ ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದು, ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಫ್ಲೇವಿ ಪಾಯ್ಸ್ ವಂದಿಸಿದರು, ಶಾಂತಿ ಬಾರೆಟ್ಟೊ ನಿರೂಪಿಸಿದರು.