JANANUDI.COM NETWORK
ಚೆನ್ನೈ: ತಮಿಳ್ನಾಡು ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ಕೇಳಿಬಂದಿತು. ಆದರೆ ಈ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈಗ ಬೆಳಕಿಗೆ ಬಂದ ನೂತನ ವಿಡಿಯೋ ಒಂದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂಬ ಭಯದಿಂದ ವಿಷ ಸೇವಿಸಿರುವುದಾಗಿ ಹೇಳುವುದು ಕೇಳಿಸುತ್ತದೆ.
ಈಗ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ ಶುಚಿಗೊಳಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು ಹೀಗೆ ಬೇರೆ ಕೆಲಸ ವಹಿಸಿದ್ದರು ಎಂದು ಆಕೆ ಹೇಳುವುದು ಕೇಳಿಸುತ್ತದೆ. ಆದರೆ ಈ ವೀಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
ಇದಕ್ಕೂ ಮುಂಚೆ ಹರಿದಾಡಿದ ಇನ್ನೊಂದು ವೀಡಿಯೋದಲ್ಲಿ ಆಕೆ ತನ್ನ ಹಾಸ್ಟೆಲ್ ವಾರ್ಡನ್ ತನ್ನನ್ನು ನಿಂದಿಸಿದ್ದಾರೆ ಹಾಗೂ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೈಯ್ಯುವ ಯತ್ನದ ಬಗ್ಗೆ ಮಾತನಾಡಿದ್ದಳು. ಬಾಲಕಿ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ, ವಿದ್ಯಾರ್ಥಿನಿ ಪೆÇೀಷಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಮತಾಂತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಶಾಲೆಗಳನ್ನು ಮುಚ್ಚಲು ಮತ್ತು ಶಾಲೆಯ ಆಡಳಿತವನ್ನು ರಕ್ಷಿಸಲು ಪೆÇಲೀಸರು ಪ್ರಯತ್ನಿಸುತ್ತಾರೆ, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಈಗ ಪ್ರಕರಣವನ್ನು ಬಲವಂತದ ಮತಾಂತರ ಎಂದು ಬಿಂಬಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪಗಳು ಸುಳ್ಳು ಅವರನ್ನು ಬಂಧಿಸಬೇಕೆಂದು ಟ್ವಿಟರನಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ. ಅಣ್ಣಾಮಲೈ ಎಡಿಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು. ಅವರು ಧಾರ್ಮಿಕ ಗಲಭೆ ಸೃಷ್ಟಿಸುವ ಪಿತೂರಿ ನಡೆಸುತ್ತಿದ್ದಾರೆ. ಅವರನ್ನು ಬಂಧಿಸಬೇಕು ಎನ್ನುವ ಒತ್ತಾಯ ಟ್ವಿಟರನಲ್ಲಿ ಕೇಳಿಬರುತ್ತಿದೆ.
ಆದರೆ ಪೆÇಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಮತಾಂತರದ ವಿಷಯ ಇಲ್ಲ. ‘ವಾರ್ಡನ್ ತನ್ನ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ನನಗೆ ಒತ್ತಾಯಿಸಿದ್ದರು. ಈ ಕಿರುಕುಳ ತಾಳಲಾಗದೇ ತಾನು ಅತ್ಮಹತ್ಯೆ ಮಾಡಿಕೊಂಡಿದ್ದೆನೆ’ ಎಂಬ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಟ್ವಿಟ್ಟರ್ ಬಳಕೆದಾರರಾದ ಸಾವುಕ್ಕು ಶಂಕರ್ ಟ್ವೀಟ್ ಒಂದನ್ನು ಮಾಡಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಾಡುತ್ತಿರುವ ಆರೋಪ ಸುಳ್ಳು, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ ಒಂದರಲ್ಲಿ ತಿರುಕಟ್ಟರುಪಲ್ಲೈ ವಿದ್ಯಾರ್ಥಿನಿ ನನಗೆ ಯಾವುದೇ ಕಿರುಕುಳ ಕೊಟ್ಟಿಲ್ಲ ಹಾಗೂ ನನ್ನ ಹಣೆಯ ಮೇಲಿನ ಸಿಂಧೂರ ಅಳಿಸುವಂತೆಯೂ ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಳು’ ಎಂದು ಇದೆಯೆಂದು ತಿಳಿಸಿದ್ದಾರೆ.
ಆದರೆ ದುರಂತಕ್ಕೆ ಮತಾಂತರ ಯತ್ನವೇ ಕಾರಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ನಾಯಕರು ದೂರಿದ್ದಾರೆ. ಅಲ್ಲದೆ ಶಾಲೆಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧಿಸಿದಂತೆ ಶಾಲಾ ಹಾಸ್ಟೆಲ್ ವಾರ್ಡನ್ರನ್ನು ಪೆÇಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಮಿಳುನಾಡಿನ ಪೆÇಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.
ಆಕೆಯ ಹೆತ್ತವರ ಹೇಳಿಕೆಯನ್ನು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ ಮಧುರೈ ಪೀಠವು ಆದೇಶಿಸಿದೆ. ಆಕೆಯ ಹೇಳಿಕೆ ಕುರಿತ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ತನ್ನ ಫೆÇೀನ್ ಅನ್ನು ಫೆÇರೆನ್ಸಿಕ್ ತಪಾಸಣೆಗೆ ಹಾಜರು ಪಡಿಸಬೇಕೆಂದೂ ನ್ಯಾಯಾಲಯ ತಿಳಿಸಿದೆ. ಈಗ ಆ ಫೆÇೀನ್ ಪೆÇಲೀಸರ ವಶದಲ್ಲಿದೆ. ಹುಡುಗಿಯ ಹೇಳಿಕೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಗೆ ಯಾವುದೇ ಕಿರುಕುಳ ನೀಡದಂತೆ ನ್ಯಾಯಾಲಯ ಪೆÇಲೀಸರಿಗೆ ಸೂಚಿಸಿದ್ದು, ಆಕೆಯ ಆತ್ಮಹತ್ಯೆಗೆ ಕಾರಣಗಳೇನು ಎಂಬ ಕುರಿತು ತನಿಖೆಗೆ ಒತ್ತು ನೀಡುಬೇಕೆಂದು ಸೂಚಿಸಿದೆ.