

ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಎಂ.ಬೈರೇಗೌಡ ಸಲ್ಲಿಸಿದರು. ನಾಮ ಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರ ನಾಮಪತ್ರವನ್ನ ಚುನಾವಣಾಧಿಕಾರಿ ಐಮಾರೆಡ್ಡಿರವರಿಗೆ ಸಲ್ಲಿಸಿದರು.
ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂ.ಬೈರೇಗೌಡ ಮಾತನಾಡುತ್ತಾ ಈಗಾಗಲೇ ವಿವಿಧ ಇಲಾಖೆಗಳಿಂದ ಚುನಾವಣೆಯಲ್ಲಿ 32 ನಿರ್ದೆಶಕರು ವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 3 ಮಂದಿ ಆಕಾಂಕ್ಷಿಗಳಿದ್ದೇವೆ ಇವರಲ್ಲಿ ನಾನೂ ಒಬ್ಬನಾಗಿದ್ದೇನೆ ನನಗೆ ಒಮ್ಮೆ ಅವಕಾಶ ನೀಡಿ ತಾಲ್ಲೂಕಿನ ನೌಕರರ ಸಮಸ್ಯೆಗಳಿಗೆ ದ್ವನಿಯಾಗಿ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ಎಲ್ಲಾ ನಿರ್ದೇಶಕರು ನನ್ನ ಅಧ್ಯಕ್ಷನಾಗಿ ಆಯ್ಕೆ ಮಾಡಿದಲ್ಲಿ ಶ್ರೀನಿವಾಸಪುರ ತಾಲೂಕಿನ ನೌಕರರ ಸಂಘವನ್ನು ಬಲಪಡಿಸುವುದರೊಂದಿಗೆ ನೌಕರರ ಹಿತಕಾಪಾಡಲು ನಾನು ಸದಾ ಸಿದ್ದನ್ನಿದ್ದೇನೆ. ಕಳೆದ 15 ವರ್ಷಗಳ ಸಂಘಟನೆಯಲ್ಲಿ ಕೆಲಸ ಮಾಡಿರುತ್ತೇನೆ. ಮತದರಾರ ಆರ್ಶೀವಾದದಿಂದ ಮೂರು ಚುನಾವಣೆಗಳಲ್ಲಿ ಎದುರಿಸಿ ಹ್ಯಾಟ್ರಿಕ್ ಗೆಲವು ಸಾಧಿಸಿ ಮತದಾರರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಅದೆ ರೀತಿಯಾಗಿ ಮುಂದಿನ ಹೆಜ್ಜೆಯಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮ ಪತ್ರ ಸಲ್ಲಿಸಿದ್ದೇನೆ ಎಂದರು.
ಸಹಾಯಕ ಚುನಾವಣಾಧಿಕಾರಿ ವಿ.ತಿಪ್ಪಣ್ಣ, ನೌಕರರ ಸಂಘದ ನಿರ್ದೇಶಕ ಎಸ್.ಮುನಿಯಪ್ಪ, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮುರಳಿಬಾಬು, ಕಾರ್ಯದರ್ಶಿ ಎಂ.ಅಶೋಕ್, ಗೌರವಾಧ್ಯಕ್ಷ ನಂಜಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಚನ್ನಕೇಶವ, ಶಿಕ್ಷಕರಾದ ಕಲಾ ಶಂಕರ್, ಶ್ರೀನಿವಾಸಯ್ಯ, ಶಿವಮೂರ್ತಿ, ಶಿವರಾಮೇಗೌಡ, ಹನುಮಪ್ಪ, ಹೊಗಳಗೆರೆ ನಾಗರಾಜ್, ಮುನೇಗೌಡ, ನರಸಿಂಹಸ್ವಾಮಿ, ಪೃಥ್ವಿ, ರವಿಕುಮಾರ್, ರಾಮಚಂದ್ರಗೌಡ ಇದ್ದರು.