SSLC ಪರೀಕ್ಷೆ ಬರೆದ  ವಿದ್ಯಾರ್ಥಿಗಳಿಗೆ ಸಿಹಿಸುದ್ದಿ  ಶೇಕಡಾ 10 ಕೃಪಾಂಕ ದೊರಕುತ್ತವೆ!  ಷರತ್ತುಗಳು‌ ಅನ್ವಯ!! 

JANANUDI.COM NETWORK


ಬೆಂಗಳೂರು :SSLC  ಪರೀಕ್ಷೆ ಬರೆದು ಫಲಿತಾಂಶ ಎದುರು ನೋಡುತ್ತಿರುವ SSಐಅ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ. ಹೆಚ್ಚು ಮಕ್ಕಳು ಫೇಲಾಗುವುದನ್ನು ತಪ್ಪಿಸಲು ಶೇಕಡ 10 ರಷ್ಟು ಕೃಪಾಂಕ ನೀಡಲಾಗುತ್ತದೆ. ಮೂರು ವಿಷಯಗಳಿಗೆ ಒಟ್ಟು ಶೇಕಡ 10 ರಷ್ಟು ಮಾರ್ಕ್ಸ್ ನೀಡಲಿರುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.ಕೆಲವೇ ಅಂಕದಿಂದ ಫೇಲ್ ಆಗುವವರಿಗೆ ಪಾಸ್ ಆಗುವುದರಲ್ಲಿ ಸಹಕಾರ ಸರ್ಕಾರ ನಿರ್ಧರಿಸಿದೆ.
ಹಾಗಾಗಿ ಫೇಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಆದರೆ ಷರತ್ತುಗಳಿವೆ ಫೇಲಾದ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳ ಶೇಕಡ 10 ರಷ್ಟು ಕೃಪಾಂಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಉತ್ತಿರ್ಣವಾಗುವುದಾದರೆ ಮಾತ್ರ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಲಾಗಿದೇ. ಆದರೂ ಹಲವಾರು ವಿಧ್ಯಾರ್ಥಿಗಳಿಗೆ ಪಾಸಾಗಲು ಇದೊಂದು ಉತ್ತಮ ಅವಕಾಶ ಲಬ್ಧವಾಗಿದೆ ಎಂದು ಹೇಳಬಬಹುದು.