ಕೋಲಾರ : ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕೆAದು ಅಬಕಾರಿ ನಿರೀಕ್ಷಕಿ ಎಂ.ಸುಮಾ ಅವರು ಕರೆ ನೀಡಿದರು.
ನಗರದ ಸ್ಮಾರ್ಟ್ ಪದವಿ ಕಾಲೇಜಿನಲ್ಲಿ ಅಬಕಾರಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರ್ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸದೃಡ ದೇಶ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ವದಾಯಕವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯವಂತ ಜೀವನಶೈಲಿ ಬಹುಮುಖ್ಯ ಎಂದ ಅವರು, ಆಕರ್ಷಣೆ, ಕತೂಹಲ, ದುಷ್ಟರ ಸಹವಾಸಕ್ಕೆ ಸಿಲುಕಿ ಮಾದಕ ವ್ಯಸನಕ್ಕೆ ದಾಸರಾಗಿದ್ದಲ್ಲಿ ಅಂತಹ ವ್ಯಕ್ತಿಯ ಜೀವನದ ಜೊತೆಗೆ ಆತನ ಕುಟುಂಬವು ಬೀದಿ ಪಾಲಾಗುತ್ತದೆ ಎಂದು ವಿವರಿಸಿದರು.
ಯಾರಾದರೂ ಈ ರೀತಿ ಹಾದಿ ತಪ್ಪಿದ್ದಲ್ಲಿ ವಿದ್ಯಾವಂತರಾದ ನೀವು ಅಂತಹವರನ್ನು ಎಚ್ಚರಿಸುವಂತಾಗಬೇಕು. ಅಪ್ಪಿತಪ್ಪಿಯೂ ನೀವು ಸಹ ಮಾದಕ ಲೋಕದ ಜಾಲಕ್ಕೆ ಸಿಲುಕಬಾರದು ಎಂದ ಒತ್ತಿ ಹೇಳಿದ ಅವರು, ನಿಮ್ಮ ಸದೃಡ ಆರೋಗ್ಯದಿಂದ ಕುಟುಂಬ, ಸಮಾಜ ಹಾಗೂ ದೇಶದ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ದುಶ್ಚಟಗಳಿಗೆ ದಾಸರಾಗುವ ವ್ಯಕ್ತಿಗಳಿಗೆ ಈ ಸಮಾಜದಲ್ಲಿ ಬೆಲೆ ಇರುವುದಿಲ್ಲ ಎಂಬುವುದು ತಿಳಿದಿರಲಿ ಎಂದು ಎಚ್ಚರಿಸಿದ ಸುಮಾ ಅವರು, ಮೋಜು, ಮಸ್ತಿ, ದುಂದು ವೆಚ್ಚ, ಮನೋರಂಜನೆ, ಪಾರ್ಟಿಗಳು ಹಾಗೂ ಕುಂಟು ನೆಪಗಳ ಕಾರಣ ಮುಂದಿಟ್ಟುಕೊAಡು ದುಶ್ಚಟಗಳಿಗೆ ಬಿದ್ದರೆ, ಅದರ ಜಾಲದಿಂದ ಹೊರ ಬರುವುದು ಕಷ್ಟ ಅದಕ್ಕಾಗಿ ತಪ್ಪಿನಲ್ಲೀ ಸಿಲುಕುವ ಮೊದಲು ಜಾಗೃತಿ ಇರಲಿ, ಹಾಗೆಯೇ ಆರೋಗ್ಯವಂತ ಯುವ ಜನತೆಯಿಂದ ಸದೃಡ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಉಪ ನಿರೀಕ್ಷಕ ಜಯಣ್ಣ, ಕಾಲೇಜಿನ ಉಪನ್ಯಾಸಕ ವರುಣ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ಕೌಟ್ ಆಯುಕ್ತ ಸುರೇಶ್, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ ಭಾಗವಹಿಸಿದ್ದರು.