ಶ್ರೀನಿವಾಸಪುರ 4 : ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬಿಇಓ ವಿ.ಉಮಾದೇವಿ ಸಲಹೆ ನೀಡಿದರು.
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಸಮಾಜ ಸೇವಕ ಸಾಧಿಕ್ ಅಹಮದ್ ಹಾಗು ಎಟಿಎಸ್ ರಿಜ್ವಾನ್ ರವರು ಮಕ್ಕಳಿಗೆ ಉಚಿತ ಪಠ್ಯ ಪರಿಕರಗಳು ವಿತರಣಾ ಕಾಯಕ್ರಮದಲ್ಲಿ ಮಾತನಾಡಿದರು.
ಶಾಲೆಯಲ್ಲಿ 2 ಕೊಠಡಿಗಳ ಕೊರತೆ ಇದ್ದು, ಚುನಾವಣೆಯ ಸಂಬಂಧ ಯಾವುದೇ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಕಾಮಗಾರಿಗಾಗಿ ಟೆಂಡರ್ ಕರೆದು ಅತಿ ಶೀಘ್ರದಲ್ಲಿಯೇ ಕಾಮಾಗಾರಿ ಪ್ರಾರಂಭಗೊಳ್ಳುತ್ತವೆ ಎಂದರು . ಇಲಾಖೆ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುವುದಾಗಿ ತಿಳಿಸಿದರು.
ಸಮಾಜ ಸೇವಕ ಹಾಗೂ ದಾನಿ ಸಾಧಿಕ್ ಅಹಮದ್ ಮಾತನಾಡಿ ಶಿಕ್ಷಕರು ಸಮಾಜದ ಶಿಲ್ಪಿಗಳು. ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವುದರ ಮೂಲಕ ಸಮಾಜಕ್ಕೆ ಕೊಡಿಗೆಯಾಗಿ ನೀಡುತ್ತಾರೆ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಆರೋಗ್ಯವಂತ ಸಮಾಜವನ್ನು ಸೃಷ್ಟಿಮಾಡಬೇಕು ಎಂದು ಸಲಹೆ ನೀಡಿದರು.
ಬಿಆರ್ಸಿ ಸಂಯೋಜಕರಾದ ಕೆ.ಸಿ.ವಸಂತ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಸಂಪನ್ಮೂಲ ವ್ಯಕ್ತಿ ಚಂದ್ರಪ್ಪ, ಸಿಆರ್ಪಿಗಳಾದ ಆರೀಫ್ಬಾಷ , ಅಕ್ಮಲಖಾನ್, ಇಸಿಒ ಕೋದಂಡಪ್ಪ, ಶಿಕ್ಷಕರಾದ ರೀಯಾನಖಾನಂ, ನೂರುನ್ನಿಸಾ, ಅಸ್ಮಸುಲ್ತಾನ್, ಭಾರತಮ್ಮ, ಅಮ್ಮಜಾನ್ ಇತರರು ಇದ್ದರು.
ಪೋಟು 4 : ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಮಕ್ಕಳಿಗೆ ಬಿಇಒ ವಿ.ಉಮಾದೇವಿ ಉಚಿತ ಪಠ್ಯ ಪರಿಕರಗಳು ವಿತರಿಸಿದರು.