

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಪ್ರತಿ ದಿನ ಒಳ್ಳೇಯ ಪೌಷ್ಟಿಕ ಆಹಾರವನ್ನು ಪಡೆದು ಯೋಗಬ್ಯಾಸವನ್ನು ಮಡುತ್ತಾ , ಆರೋಗ್ಯವಂತ ಜೀವನವನ್ನು ನಡೆಸುವಂತೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಲಕ್ಷ್ಮೀಪುರ ಪ್ರೌಡಶಾಲೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಲ್ಲಿ ಮೊಟ್ಟೆ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ಇರುವ ವಿದ್ಯಾಥಿಗಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಆ ವಿದ್ಯಾಥಿಗಳ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು, ಆಹಾರಕ್ಕಾಗಿಯೂ ಪರದಾಡುತ್ತಿದ್ದು ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಕಳವಳ ಪಡೆದರು.
ಇಒ ಕೃಷ್ಣಪ್ಪ ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮುಂದಾಗಿದ್ದು, ವಾರದಲ್ಲಿ 3 ದಿನ ಮಕ್ಕಳಿಗೆ ಮೊಟ್ಟೆ / ಬಾಳೆಹಣ್ಣು, ಚುಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಓದಿನೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತೆ ತಿಳಿಸಿದರು.
ಬಿಇಒ ಭಾಗ್ಯಲಕ್ಷ್ಮಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಾಕವಾದ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಮುಖಂಡರಾದ ಜಗದೀಶ್ಕುಮಾರ್, ತೂಪಲ್ಲಿ ಮಧುಸೂದನರೆಡ್ಡಿ, ಇಸ್ಮಾಯಿಲ್, ಉಪ್ಪರಹಳ್ಳಿ ಬಾರ್ ನಾರಾಯಣಸ್ವಾಮಿ, ಎಸ್ಡಿಎಂಸಿ ಸದಸ್ಯರು, ಕೊಂಡಸಂದ್ರ ಗಂಗರಾಜಣ್ಣ, ನಂಬುವಾರಿಪಲ್ಲಿ ಶಂಕರರೆಡ್ಡಿ, ಗ್ರಾ.ಪಂ ಸದಸ್ಯ ಪ್ರೇಮ, ಬಿಆರ್ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ನಿರ್ದೇಶಕಿ ಸುಲೋಚನ, ಪಿಡಿಒ ಗೌಸ್ಸಾಬ್, ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸಲು, ಎಸ್ಡಿಎಂಸಿ ಅಧ್ಯಕ್ಷ ಜಾಖೀರ್ ಹುಸೇನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಾಲಾಚಾರಿ ಇದ್ದರು.
