ಉಕ್ರೇನ್‌ ನಿಂದ ಮರಳಿದ ವಿದ್ಯಾರ್ಥಿಗಳು ಕೇಂದ್ರದ ಸರಕಾರದ ವಿರುದ್ಧ ಆಕ್ರೋಶ

JANANUDI.COM NETWORK

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ ದೇಶದಿಂದ ಭಾರತಕ್ಕೆ ವಿಶೇಷ ವಿಮಾನಗಳ ಮೂಲಕ ವಾಪಸ್ಸಾದ ವಿದ್ಯಾರ್ಥಿಗಳಿಗೆ ಕೇಂದ್ರದ ಮಂತ್ರಿಗಳು ಗುಲಾಬಿ ಹೂ ಕೊಟ್ಟು ಸ್ವಾಗತಿಸಲಾಗುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರದ ನೆಡೆಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ್‌ ಮೂಲದ ದಿವ್ಯಂಶು ಸಿಂಗ್‌ ಎಂಬ ವಿದ್ಯಾರ್ಥಿ ಉಕ್ರೇನ್‌ ನಿಂದ ಹಂಗೇರಿ ಗಡಿ ತಲುಪಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಭಾರತದ ದೆಹಲಿಗೆ ಮರಳಿದ್ದಾರೆ. ಈ ವೇಳೆ ಗುಲಾಬಿ ಹೂ ಕೊಟ್ಟು ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

  ಈ ವೇಳೆ ಮಾತನಾಡಿದ ದಿವ್ಯಂಶು ಸಿಂಗ್‌,ಭೀಕರ  ಯುದ್ಧ ಸ್ಥಳ ಉಕ್ರೇನ್‌ನಿಂದ ಪಾರಾಗಿ ಹಂಗೇರಿ ಗಡಿ ತಲುಪಿದ ಬಳಿಕ ನಮಗೆ ಭಾರತ ಸರ್ಕಾರ ಸಹಾಯ ಮಾಡಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದಾಗ ಯಾವುದೇ ನಮಗೆ ಭಾರತ ಸರಕಾರದಿಂದ ಸಹಾಯ ಸಿಗಲಿಲ್ಲ. ಹಂಗೇರಿ ತಲುಪಲು ನಮಗೆ ನಾವೇ ಶ್ರಮವಹಿಸಿದ್ದೇವೆ. ನಾವು 10 ಮಂದಿ ಗುಂಪು ಕಟ್ಟಿಕೊಂಡು ದಟ್ಟಣೆಯಿದ್ದ ರೈಲಿನಲ್ಲಿ ಹೇಗೋ ಪ್ರಯಾಣ ಮಾಡಿದೆವು ಎಂದು ತಮ್ಮ ಕಷ್ಟದ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.