

ಕುಂದಾಪುರ : ರಾಷ್ಟೀಯ ಮತದಾರರ ದಿನಾಚರಣೆಯ(NVD)ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 26/11/2024 ರಂದು ಬಿ ಆರ್ ಸಿ ಕುಂದಾಪುರದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಇಲ್ಲಿನ
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಗ್ರೀಷ್ಮಾ (9ನೇ ತರಗತಿ)ಮತ್ತು ರಿಷಿ ಎಸ್ ಶೆಟ್ಟಿ (9ನೇ ತರಗತಿ) ತಾಲೂಕು ಮಟ್ಟದಲ್ಲಿ ಪ್ರಥಮಸ್ಥಾನಿಯಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ಈ ವಿಶೇಷ ಪ್ರತಿಭೆಗಳಿಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಪ್ರತಿನಿಧಿಗಳು ಅಭಿನಂದಿಸಿ ಜಿಲ್ಲಾಮಟ್ಟದಲ್ಲೂ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ
ಶುಭಕೋರಿರುತ್ತಾರೆ