

ಕುಂದಾಪುರ (ನ:23) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್, ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಅನೇಕ ವಿದ್ಯಾರ್ಥಿಗಳು ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕದ ವತಿಯಿಂದ ನಡೆದ 4ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ 2024ರಲ್ಲಿ ಭಾಗವಹಿಸಿ, ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರತೀಕ್ ಮತ್ತು ಅರ್ನಾನ್. ಡಿ. ಅಲ್ಮೇಡಾ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ, ಆರ್ಯನ್ ಕೆ ಪೂಜಾರಿ – ದ್ವಿತೀಯ, ಭುವನ್ ಪೂಜಾರಿ – ಕಟಾ – ಪ್ರಥಮ, ಕುಮಿಟೆ – ದ್ವಿತೀಯ, ಅಥರ್ವ ಖಾರ್ವಿ ಕಟಾ – ದ್ವಿತೀಯ, ದಕ್ಷ್. ಆರ್ ಖಾರ್ವಿ- ಕುಮಿಟೆ, ಕಟಾ – ದ್ವಿತೀಯ ಮತ್ತು ಪ್ರನೀತಾ – ಕುಮಿಟೆ – ದ್ವಿತೀಯ, ಕಟಾ- ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತ ಬಾಲ ಕರಾಟೆ ಪಟುಗಳನ್ನು ಸಂಸ್ಥೆ ಅಭಿನಂದಿಸಿತು.
