

ಫಳ್ನೀರ್ ಫೆ.21: ದಕ್ಷಿಣಕನ್ನಡ ಸಾಹಿತ್ಯ ಪರಿಷತ್ತು ಇವರಿಂದ ನೆಡಸಲ್ಪಟ್ಟ, ಸಂತ ಮೆರೀಸ್ ಫ್ರೌಢಶಾಲೆಯ ಮಂಗಳೂರು ಇಲ್ಲಿಯ 22 ವಿದ್ಯಾರ್ಥಿಯರು ತಮ್ಮ ಶಾಲಾ ಶಿಕ್ಷಕಿಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಕೋಣಾಜೆ, ಮಂಗಳ ಸಭಾಂಗಣ ಗಂಗೋತ್ರಿಯಲ್ಲಿ ಏರ್ಪಾಡಿಸಿದ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ,ಮಂಗಳೂರು ಫಳ್ನೀರಿನ ಸಂತ ಮೆರೀಸ್ ಫ್ರೌಢಶಾಲೆಯ 22 ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಕಿಯೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು. ಅವರು ಪಡೆದ ಅನುಭವ ಅಪಾರ ಹಾಗೂ ಶ್ಲಾಘನೀಯ. ಆ ಅನುಭವಗಳನ್ನು ಇತರರೊಂದಿಗೆ ಹಂಚಿ ತಮ್ಮ ಸಂತೋಷವನ್ನು ಶಾಲೆಯಲ್ಲಿ ವ್ಯಕ್ತ ಪಡಿಸಿದರು. ಈ ವಿಧ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯರು ಮತ್ತು ಶಿಕ್ಷಕ, ಶಿಕ್ಷಕೇತ್ರರ ಸಿಬಂದಿ ಅಭಿನಂದಿಸಿದ್ದಾರೆ.


