

ಬೈಂದೂರು; ಇಲ್ಲಿನ ಹೋಲಿಕ್ರಾಸ್ ಚರ್ಚ್ ನಲ್ಲಿ ಎಸ್ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ರೀಯಾ ಕ್ಯಾಸ್ತೊಲಿನೊ, ರಿಯಾನ್ ಕ್ಯಾಸ್ತೊಲಿನೊ, ಶೋನಲ್ ಡಾಯಸ್,ಸಾನ್ಸಿಯಾ ಅಲ್ಮೇಡಾ, ಪೆಲ್ಟನ್ ನಜ್ರೆತ್, ಕ್ರಿಸ್ಟನ್ ಲೋಬೋ, ಎಲ್ಸಿಯಾ ಲೋಬೋ, ಮೆಲ್ಸಟನ್ ಲೋಬೋ, ರೆನಿಟಾ ನಜ್ರೆತ್ ಹಾಗೂ ಕನ್ನಡ ಮಾಧ್ಯಮದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬೈಂದೂರು ಚರ್ಚ್ ಸ್ಕೂಲಿನ ಹಳೆ ವಿದ್ಯಾರ್ಥಿ ಮಾನ್ಯ ಎಮ್ . ಇವಳನ್ನು ಚರ್ಚ್ ನ ಪರವಾಗಿ ಧರ್ಮಗುರು ರೆ. ಫಾ. ವಿನ್ಸೆಂಟ್ ಕುವೆಲ್ಲೊರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರೆ. ಫಾ. ಸಂದೇಶ್ ಫೆರ್ನಾಂಡಿಸ್ , ರೆ.ಫಾ. ಕಿರಣ್ ನಜ್ರೆತ್ ರವರು ಉಪಸ್ಥಿತರಿದ್ದರು.











