ವಿದ್ಯಾರ್ಥಿಗಳು ಆಟಗಳಲ್ಲಿ ಪಾಲ್ಗುಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳನ್ನು ಬೆಳಸುವಂತಾಗುತ್ತದೆ

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಆಟಗಳಲ್ಲಿ ಪಾಲ್ಗುಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳನ್ನು ಬೆಳಸುವಂತಾಗುತ್ತದೆ. ಹಾಗು ಕ್ರೀಡೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಬಿಇಒ ವಿ.ಉಮಾದೇವಿ ತಿಳಿಸಿದರು.
ತಾಲ್ಲೂಕಿನ ಗೌನಿಪಲ್ಲಿಯ ವೆಂಕಟೇಶ್ವರ ಪ್ರೌಡಶಾಲಾ ಆವರಣದಲ್ಲಿ ಸೋಮವಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಟ , ಪಾಠಗಳು ಒಂದೇ ನಾಣ್ಯದ ಎರಡು ಮುಖಗಳಂತೆ ವಿದ್ಯಾರ್ಥಿಗಳು ಪಾಠಕ್ಕೆ ಎಷ್ಟು ಪಾಮುಖ್ಯತೆಯನ್ನು ನೀಡಿತ್ತೀರೂ , ಅದೇ ರೀತಿಯಾಗಿ ಆಟಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡುವಂತೆ ಕರೆ ನೀಡಿದರು.
ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್‍ರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು ಮೊದಲನೆಯದಾಗಿ ಕ್ರೀಡೆಗಳಲ್ಲಿ ಪಾಲ್ಗುಳ್ಳಬೇಕು. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ, ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ವೇದಿಕೆಗಳ ಮೂಲಕ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕು ಎಂದರು.
ಗೌನಿಪಲ್ಲಿ ಗ್ರಾ.ಪಂ.ಅಧ್ಯಕ್ಷ ಶೇಷಾದ್ರಿ ಮಾತನಾಡಿ ಮಕ್ಕಳಿಗೆ ಮುಖ್ಯವಾಗಿ ವಿದ್ಯೆ ಮತ್ತು ಆರೋಗ್ಯ. ಎರಡು ಮುಖ್ಯ. ವಿದ್ಯೆಯನ್ನು ಶಿಕ್ಷಕರು ಹೇಳಿಕೊಡುತ್ತಾರೆ. ವಿದ್ಯೆಗೆ ಯಾವ ರೀತಿಯಲ್ಲಿ ಶಿಕ್ಷಕರು, ಪೋಷಕರು ಪ್ರೋತ್ಸಾಹ ನೀಡಿತ್ತೀರೂ ಅದೇ ರೀತಿಯಾಗಿ ಆಟಗಳಿಗೂ ಪ್ರೋತ್ಸಾಹ ನೀಡಿ ಆರೋಗ್ಯವಂತ ಸಮಾಜವನ್ನು ಕಟ್ಟಬೇಕೆಂದು ಎಂದು ಸಲಹೆ ನೀಡಿದರು.
ಐದು ದಿನಗಳು ನಡೆಯುವ ಈ ಕ್ರೀಡಾಕೂಟಕ್ಕೆ ಊಟದ ವ್ಯವಸ್ಥೆ, ಬಹುಮಾನಗಳನ್ನು ಹಾಗೂ ಪ್ರಶಸ್ತಿಪತ್ರಗಳನ್ನು ದಾನಿಗಳಾದ ಪಿ.ಟಿ.ಶಂಕರ್, ಜಿ.ಆರ್.ಮುರಳಿಕೃಷ್ಣ, ವೆಂಕಟರಾಮಯ್ಯ ಶೆಟ್ಟಿ, ವೈ.ಬಿ.ರವಿಕುಮಾರ್, ಟಿ.ವಿ.ವೆಂಕಟರಮಪ್ಪ, ಕೆ.ಸಿ.ರಾಮಸುಬ್ಬು ವ್ಯವಸ್ಥೆ ಮಾಡಿಕೊಡುವುದರ ಮೂಲಕ ಕ್ರೀಡಾಕೂಟ ಯಶ್ವಸಿಯಾಗಿ ನಡೆಯಲು ಸಹಕರಿಸಿದ್ದಾರೆ.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೇವ್ಯಾನಾಯಕ್, ಕೂರಿಗೇಪಲ್ಲಿ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥರೆಡ್ಡಿ, ಮುಖಂಡರಾದ ಪಿ.ಟಿ.ಶಂಕರ್, ರೆಡ್ಡಪ್ಪ, ಜಾಮಕಾಯಿಲ ವೆಂಕಟೇಶ್, ಕ್ಷೇತ್ರಸಂಪನ್ಮೂಲ ವ್ಯಕ್ತಿ ವಸಂತ, ಅಕ್ಷರದಾಸೋಹದ ತಾಲ್ಲೂಕು ನಿರ್ದೇಶಕಿ ಸುಲೋಚನ, ಟಿಪಿಒ ನಾರಾಯಣಸ್ವಾಮಿ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಗವಾದಿನಾಗರಾಜ್, ಕಾರ್ಯದರ್ಶಿ ತಿಪ್ಪಣ್ಣ, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸುಬ್ರಮಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಸಿ.ವಿ.ಶಿವಣ್ಣ, ನಿರ್ದೇಶಕ ರಘುನಾಥರೆಡ್ಡಿ, ಕ್ರೀಡಾಕೂಟದ ಅಧ್ಯಕ್ಷ ಕೆ.ಎನ್.ರಾಮಚಂದ್ರ, ಆಯೋಜಕ ಬಾಬಯ್ಯ, ಕಾರ್ಯದರ್ಶಿ ಕೆ.ಕೃಷ್ಣಯ್ಯ, ವೆಂಕಟೇಶ್ವರ ಶಾಲೆಯ ಮುಖ್ಯ ಶಿಕ್ಷಕ ರೆಡ್ಡಪ್ಪ , ಹೋಬಳಿ ಎಲ್ಲಾ ಕ್ಲಸ್ಟರ್‍ಗಳ ಸಿಆರ್‍ಪಿಗಳು ಇತರರು ಇದ್ದರು.