ವಿದ್ಯಾರ್ಥಿಗಳು ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯ : ಫಾ|ಜೊರ್ಜ್ ಡಿಸೋಜ

JANANUDI.COM NETWORK

“ವಿದ್ಯಾರ್ಥಿಗಳು ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ಶ್ರೇಷ್ಠ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ .ಉತ್ತಮ ಶಿಕ್ಷಣ ಸಂಸ್ಥೆ ,ಆದರ್ಶ ಗುರುಗಳು ಮತ್ತು ಹೆತ್ತವರ ಆಶೀರ್ವಾದ ದೊರೆತಾಗ ಸಾಧನೆಯ ಖುಷಿಯೂ ಇಮ್ಮಡಿಯಾಗುತ್ತದೆ “ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಜೊರ್ಜ್ ಡಿಸೋಜ ಅವರು ಹೇಳಿದರು. ಅವರು ಮೂಡುಬೆಳ್ಳೆಯ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಸಾಧಕರ ಸನ್ಮಾನ ಕಾರ್ಯಕ್ರಮ ” ಎಕ್ಸಲೆನ್ಸ್ ಡೇ “ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು .ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಸಂಸ್ಥೆಯ ಹಳೆ ವಿದ್ಯಾರ್ಥಿ ಡಾಕ್ಟರ್ ರೋಷನ್ ಮಾರ್ಟಿಸ್ ಇವರನ್ನು ಸನ್ಮಾನಿಸಲಾಯಿತು .ಅದೇ ರೀತಿ ಕಳೆದ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಸಂಸ್ಥೆ ಹಳೆವಿದ್ಯಾರ್ಥಿ ಕುದಿ ವಸಂತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು . ಚರ್ಚ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಪೆರ್ನಾಂಡಿಸ್ ಉಪಸ್ಥಿತರಿದ್ದರು . ರೊಯ್ಸ್ಟನ್ ಮಾರ್ಟಿಸ್ ಮತ್ತು ಮೆಲಿಸಾ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಲಿಜ್ವಿಟಾ ಅತಿಥಿ ಪರಿಚಯ ಮಾಡಿದರು .ಬ್ರದರ್ ಫಿಲಿಪ್ ನೊರೊನಾ ಸ್ವಾಗತಿಸಿ, ಕು. ಶ್ರೇಯ ಸಲ್ಡಾನಾ ವಂದಿಸಿದರು. ಶ್ರೀಮತಿ ಜೆಸಿಂತಾ ಲೊಬೊ ಮತ್ತು ಜೋನ್ ಕ್ಯಾಸ್ತಲೀನೊ ಫಲಿತಾಂಶ ವಿಶ್ಲೇಷಣೆ ಮಾಡಿದರು. ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್, ಹಿರಿಯ ಶಿಕ್ಶಕಿ ಸುನೀತಾ ಕಾಮತ್, ಶಿಕ್ಷಣ ಸಂಸ್ಥೆಯ ಶಿಕ್ಷಕ ವ್ರಂದ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.