ಕುಂದಾಪುರ: ದಿನಾಂಕ : 31/05/2024 ನೇ ಶುಕ್ರವಾರದಂದು ಶೈಕ್ಷಣಿಕ ವರ್ಷ 2024-25 ರ ಪ್ರಾರಂಭೊತ್ಸವವು ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ವಿಜ್ರಂಬಣೆಯಿಂದ ಆಚರಿಸಿ ವಿದ್ಯಾರ್ಥಿಗಳನ್ನು ಪ್ರೀತಿ ಪೂರ್ವಕವಾಗಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲಾಯಿತು, ಈ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿದಾಖಲಾದಎಲ್ಲಾ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಗುರುತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿಯವರು ವಹಿಸಿಕೊಂಡು ಶಾಲಾ ಸಂಯೋಜಕಿ ಮಾರ್ಗರೇಟ್ ಪಿಕಾರ್ಡೊ ವಿದ್ಯಾರ್ಥಿ ನಾಯಕಿ ಹಾಗೂ ಹಿರಿಯ ಶಿಕ್ಷಕಿಯರಾದ ನೀತಾ ಮರಿಯಾ ಡಿ’ಸೋಜಾ ಹಾಗೂ ಪ್ರತಿಮಾ ಶೆಟ್ಟಿಯವರೊಂದಿಗೆ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಶಾಲಾ ನಿಯಮ ಶಿಸ್ತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಿ ರೈತ ಹೇಗೆ ತನ್ನಗದ್ದೆಗೆಉತ್ತಮ ಫಸಲಿಗೊಸ್ಕರಉತ್ತಮ ಬೀಜವನ್ನೇಬಿತ್ತುತಾನೋಅದೇರೀತಿ ಶಿಕ್ಷಕರೆಲ್ಲರೂ ಕೂಡ ವಿದ್ಯಾರ್ಥಿಗಳಉತ್ತಮ ಭವಿಷ್ಯಕ್ಕಾಗಿತಮ್ಮಜ್ಞಾನವನ್ನು ಸಮಾನವಾಗಿ ಹಂಚುತ್ತಾರೆ ಹೇಗೆ ಬಿತ್ತಿದ ಬೀಜ ಸರಿಯಾದ ಸ್ಥಳದಲ್ಲಿ ಬಿದ್ದರೆ ಉತ್ತಮ ಫಸಲು ಸಿಗುವುದೊ ಅದೇರೀತಿ ಶಿಕ್ಷಕರಿಂದ ಕೆಳಲ್ಪಟ್ಟ ಪಾಠ ವಿದ್ಯಾರ್ಥಿಗಳು ಮನವಿಟ್ಟು ಗ್ರಹಿಸಿದರೆ ಮಾತ್ರಉತ್ತಮ ಫಲಿತಾಂಶ ಬರುತ್ತದೆಎನ್ನುವ ಮಾತಿನೊಂದಿಗೆಎಲ್ಲಾ ವಿದ್ಯಾರ್ಥಿಗಳು ಗಮನವಿಟ್ಟು ಪಾಠ ಪ್ರವಚನಗಳನ್ನು ಆಲಿಸಬೇಕೆನ್ನುವ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿಯವರು ಶುಭ ಹಾರೈಸಿದರು.