ಶ್ರೀನಿವಾಸಪುರ: ಅಂತರರಾಜ್ಯ ಸಾರಿಗೆಯಲ್ಲಿ ವಿದ್ಯಾರ್ಥಿಗಳ ಪಾಸ್ ಅಂಗಿಕರಿಸಬೇಕು. ವಿದ್ಯಾರ್ಥಿಗಳ ಶಾಲೆಯ ಸಮಯದಲ್ಲಿ ಪ್ರತಿಯೊಂದು ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.ಬಸ್ಪಾಸ್ ಸಂಪೂರ್ಣವಾಗಿ ಉಚಿತಗೊಳಿಸಬೇಕು. ಹಾಗು ಉಪನ್ಯಾಸಕರ , ಶಿಕ್ಷಕರ ಒತ್ತಡಕ್ಕೆ ಕೆಲ ವಿದ್ಯಾರ್ಥಿಗಳು ಮಾನಸಿಕವಾಗಿ ಆತ್ಮಸ್ಥೈ ಕುಗ್ಗುತಿದ್ದು, ಇದೆನ್ನೆಲ್ಲಾ ಇಲಾಖಾಧಿಕಾರಿಗಳು ತನಿಖೆ ನಡೆಸಿ ಸರಿಪಡಿಸಬೇಕಾಗಿದೆ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಧಿಕ್ ಅಹ್ಮದ್ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಕನ್ನಡವೇ ಉಸಿರು ನವವೇದಿಕೆ, ನವ ಕರ್ನಾಟಕ ಸ್ವಾಭಿಮಾನ ಕನ್ನಡಿಗರ ಯುವ ಸೈನ್ಯ ರಾಜ್ಯ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮುಖ್ಯ ಮಂತ್ರಿಗಳಿಗೆ ರವಾನಿಸಲು ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಮುಳಬಾಗಿಲು ತಾಲೂಕು ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ 4 ವಿದ್ಯಾರ್ಥಿನೀಯರು ಪ್ರವಾಸಕ್ಕೆ ಹೋಗಿ ಮುರಡೇಶ್ವರದಲ್ಲಿ ಸಮುದ್ರದಲ್ಲಿ ಈಜಲು ಹೋಗಿ ಮೃತರಾಗಿದ್ದು ಮಾಲೂರು ತಾಲೂಕು ಮಾಸ್ತಿ ಶಾಲಾ ಮಕ್ಕಳ ಬಸ್ ಪಲ್ಟಿಯಾಗಿ 40 ವಿದ್ಯಾರ್ಥಿಗಳು ಆಸ್ಪತ್ರೆ ದಾಖಾಲಾಗಿದ್ದು, ಯಲಬುರ್ಗಿ ಶಾಲೆಯ ವಿದ್ಯಾರ್ಥಿ ಕಾಲುಜಾರಿ ಬಾವಿಗೆ ಬಿದ್ದು ಮೃತರಾಗಿದ್ದು ಈ ಆವಘಡಗಳ ಬಗ್ಗೆ ಹೆಚ್ಚು ಗಮನಹರಿಸದೆ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಆರೋಪಿಸಿ, ಮೃತ ಕುಟುಂಬಗಳಿಗೆ ಸರ್ಕಾರದಿಂದ ಒಬ್ಬ ವಿದ್ಯಾರ್ಥಿ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕವನ್ನು ಪಡೆಯುತ್ತಿರುವುದನ್ನು ನಿಲ್ಲಿಸಬೇಕು,ಬಡಮಕ್ಕಳು ವಿದ್ಯಾಭ್ಯಾಸವನ್ನು ಹೊಂದಲು ಸರ್ಕಾರ ದಾರಿದೀಪವಾಗಬೇಕು, ದಾರಿದೀಪವಾಗಿ ಮಕ್ಕಳ ಭವಿಷ್ಯವನ್ನು ಉಜ್ಜಲಗೊಳಿಸಬೇಕು, ಹಾಗೂ ಮಕ್ಕಳ ಭವಿಷ್ಯವನ್ನು ಬೆಳಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೇ ಮಾಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ (ಪರವಾನಿಗೆ) ಯನ್ನು ರದ್ದುಗೊಳಿಸಬೇಕು. ಒತ್ತಾಯಿಸಿದರು.
ವಿವಿಧ ಕನ್ನಡ ಪರಸಂಘಟನೆಗಳ ಮುಖಂಡರಾದ ವಿ.ಸುಗ್ರೀವ, ವೈ.ಬಿ.ಮಂಜುನಾಥ್, ಆನಂದ, ನಾಗಾರ್ಜುನರೆಡ್ಡಿ, ಸುಬ್ರಮಣಿ, ಆರುಣ್ ಕುಮಾರ್ ಇದ್ದರು.