

ಕುಂದಾಪುರ,ಜು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಪ್ರಗತಿಪರ ಚಿಂತನೆಗಳು ಬೆಳೆದು ಬರಬೇಕು. ಪ್ರತಿಯೊಬ್ಬರೂ ದೇಶವನ್ನು ಕಟ್ಟುವ ಮತ್ತು ಉನ್ನತ ಹುದ್ದೆಗೇರಬೇಕು ಎಂದು ಪ್ರಸಿದ್ಧ ವಕೀಲರು,ಉತ್ತಮ ವಾಗ್ಮಿ,ರಾಜಕೀಯ ಧುರೀಣರು ಸಂಘಟಕರು ಆಗಿರುವ ಶ್ರೀ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.
ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ವಕೀಲರಾದ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೇ ಶಿಕ್ಷಣ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು,ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ದೇಶದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಕಂಡ ಸಂಸ್ಥೆಯಾಗಿದೆ’ ಎಂದು ಕ್ರೈಸ್ತ ಮಿಷನರಿ ಸಂಸ್ಥೆಗಳನ್ನು ಹೊಗಳಿ ಹೇಳಿದರು.”ವಿದ್ಯಾರ್ಥಿಗಳು ಸ್ವ ಪ್ರಯತ್ನದಿಂದ ಉನ್ನತ ಹುದ್ದೆಗೆ ಏರಬೇಕು ಎನ್ನುತ್ತಾ ಅನೇಕ ಕ್ರಿಯಾಶೀಲ ಹಾಗೂ ಮನ ಮುಟ್ಟುವ ಮಾತುಗಳನ್ನಾಡಿ’ ಸಂಸತ್ತಿನ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರು, ಧರ್ಮಗುರುಗಳಾಗಿರುವ ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೋ ವಹಿಸಿದ್ದು ಸಂಸತ್ತಿನ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಹರಸಿ ಅಭಿನಂದಿಸಿದರು.
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಮಿ.ಜೋಯ್ಸನ್ ಡಿಸೋಜಾ ರವರು ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಶ್ಮಾ ಫೆರ್ನಾಂಡೀಸ್ ,ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ ರವರು, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಎಮ್ ಎಚ್., ಕಾರ್ಯದರ್ಶಿ ಪ್ರಗತಿ ಹಾಗೂ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಸ್ವಾಗತಿಸಿ,ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕು. ಪ್ರಗತಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಲಯಬದ್ಧ ಸಂಗೀತದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು,ಪ್ರಥಮ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
























