ಶ್ರೀನಿವಾಸಪುರ : ತಾಲೂಕಿನ ರಾಯಲ್ಪಾಡು ಸಮೀಪ ಇತ್ತೀಚಿಗೆ ಮಹಿಳಾ ಆಯೋಗದ ರಾಜ್ಯಧ್ಯಕ್ಷೆ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡದೆ ಸರ್ಕಾರ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಾಲೂಕೂ ಆಡಳಿತವು ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು .
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸೂಚಿಸಿದರು.
ರಾಯಲ್ಪಾಡು ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ
ಶನಿವಾರ ತಾಲೂಕು ಆಡಳಿತವತಿಯಿಂದ ಹಮ್ಮಿಕೊಳ್ಳಲಾದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮವು ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಗ್ರಾಮಕ್ಕೆ ಒಳ್ಳೇಯ ಪರಿಸರವೂ ಸಹ ಇದೆ. ತುಂಬಾ ಯುವಕರು ಮನಸ್ಥಿತಿಗಳು ಬದಲಾವಣೆಗಳು ಆಗಬೇಕಾಗಿದೆ ಇದಕ್ಕೆ ಒಂದಿಷ್ಟು ಎನ್ಜಿಒಗಳ ಸಹ ಯುವಕರ ಮನಸ್ಥಿತಿಗಳ ಬಗ್ಗೆ ಅವಲೋಕಿಸಿ, ಅವರ ಮನಃ ಸ್ಥಿತಿಯನ್ನು ಬದಲಿಸಬೇಕಿದೆ ಎಂದರು.
ಗ್ರಾಮದಲ್ಲಿನ ಮಕ್ಕಳಲ್ಲಿ ಜನಟಿಕ್ಸ್ ಅಥವಾ ನೀರಿನಲ್ಲಿನ ಫ್ಲೋರೈಡ್ ಅಂಶ ಜಾಸ್ತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಏಳು ಎಂಟು ಜನಕ್ಕೆ ಅಂಗವೈಕಲ್ಯದ ಸಮಸ್ಯೆಗಳು ಇದ್ದು ಅದನ್ನ ಪರಿಶೀಲಿಸಬೇಕಿದೆ.
ಗ್ರಾಮದಲ್ಲಿ ಶೈಕ್ಷಣಿಕವಾಗಿ ಒತ್ತು ನೀಡುತ್ತಿಲ್ಲ .ಕಾರಣ ನೀವು ವಲಸೆಗೆ ಹೋಗುತ್ತೀರಾ ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದರು.
ಆದ್ದರೀವಂದ ಮಕ್ಕಳ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕವಾಗಿ ಪೋತ್ಸಾಹಿಸುವಂತೆ ಮನವಿ ಮಾಡಿದರು. ನಮಗೆ ವ್ಯವಸಾಯಕ್ಕೆ ಬೇಕಾದ ಭೂಮಿಗಳ ದಾಖಲೆಗಳು ಇಲ್ಲವೆಂದು ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸದರಿಗೆ ಒಂದು ಅರ್ಜಿ ಸಲ್ಲಿಸುವಂತೆ ಹಾಗು ಜಿಲ್ಲಾಧಿಕಾರಿಗಳ , ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ನಾವು ನಿಮಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾನೂನು ರೀತ್ಯ ನಮ್ಮಿಂದ ಆಗುವ ಸಹಾಯ ಹಸ್ತವನ್ನ ನೀಡುತ್ತೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ ಸರ್ಕಾರದಿಂದ ಸಿಗುವ ಮೂಲಭೂತ ಸೌಲಭ್ಯಗಳು ಸಿಗುವ ವ್ಯವಸ್ಥೆಯನ್ನ ಮಾಡಿಕೊಡುವುದಾಗಿ ಹಂತ ಹಂತವಾಗಿ ಮಾಡುವುದಾಗಿ ಭರವಸೆ ನೀಡಿದರು.ಗ್ರಾಮದಲ್ಲಿ ಬಹುತೇಕ ಮನೆಗಳು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಮನೆಗಳನ್ನು ಕಟ್ಟಿಕೊಳ್ಳುವಂತೆ ತಿಳಿಸಿ , ಸರ್ಕಾರದಿಂದ ೧ಲಕ್ಷ ೨೫ ಸಾವಿರ, ಉಳಿದ ಕೆಲಸವನ್ನು ನರೇಗಾ ದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಮನೆಗಳನ್ನು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸ್ವಲ್ಪ ಜೀವನದ ಬದಕನ್ನು ಬದಲಾಯಿಸಿಕೊಂಡು, ಪ್ರಸ್ತುತ ದಿನಗಳು ಜೀವನ ಶೈಲಿಯು ಪರಿವರ್ತನೆಯಾಗುತ್ತಿದೆ ಅದರಂತೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುಂವತೆ ಸಲಹೆ ನೀಡಿದರು. ತಮ್ಮ ಮಕ್ಕಳ ಶೈಕ್ಷಣಿಕವಾಗಿ ಬದಲಾಯಿಸಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಸುತ್ತಾಡಿ ಮನೆ ಮನೆಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಕ್ಕೊಂದು ಕೊಳವೆ ಕೊರಿಸಿಕೊಡುವಂತೆ ಹಾಗು ಅಂಗನವಾಡಿ, ಪ್ರಾಥಮಿಕ ಶಾಲೆಯು ವ್ಯವಸ್ಥಿತವಾಗಿ ನಡೆಸಿಕೊಡಲು, ಕೆಲವರಿಗೆ ವೃದ್ದಾಪ್ಯ ವೇತನ ಇಲ್ಲವೆಂದು ಅದನ್ನ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಆಯೋಗ ಜಿಲ್ಲಾಧ್ಯಕ್ಷೆ ಲಕ್ಷಿ, ಎನ್ಜಿಒ ಶಾಂತಮ್ಮ , ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಿಎಸ್ಐ ಯೊಗೇಶ್ ಪಿಡಿಒ ಎನ್.ನರೇಂದ್ರಬಾಬು, ಬಿಐಆರ್ಟಿ. ಜಿ ವಿ ಚಂದ್ರಪ್ಪ ,ಸಿಆರ್ಪಿ ಗಳಾದ ಅಮರನಾಥ್, ವೇಣುಗೋಪಾಲ್, ಇದ್ದರು.