ಉಡುಪಿ ಜಿಲ್ಲೆ ಲಾಕ್ ಡೌನ್; ನಾಳೆಯಿಂದ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ; ಉಡುಪಿ ಜಿಲ್ಲಾಧಿಕಾರಿ ಜಗದೀಶ್

JANANUDI.COM NETWORK

ಉಡುಪಿ ಜಿಲ್ಲೆ ಲಾಕ್ ಡೌನ್; ನಾಳೆಯಿಂದ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ; ಡಿಸಿ ಜಗದೀಶ್
ಉಡುಪಿ :ಮೇ.9: ನಾಳೆ ಮೇ 10 ರಿಂದ ಜಾರಿಯಾಗಲಿರುವ ಎರಡನೇ ಹಂತದ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ,ಜಗದೀಶ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹೊರಗಿನಜಿಲ್ಲೆಯಿಂದ ಬಂದವರಿಗೆ ಉಡುಪಿ ಜಿಲ್ಲೆಯೊಳಗೆ ಯಾರನ್ನೂ ಬಿಡುವುದಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಡಿ.ಸಿ.ತಿಳಿಸಿದ್ದಾರೆ
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿ.ಪಂ.ಸಿಇಒ ಡಾ. ನವೀನ್ ಭಟ್, ಸಹಾಯಕ ಕಮಿಷ್ನರ್ ರಾಜು, ಎಡಿಸಿ ಸದಾಶಿವ ಪ್ರಭು ಹಾಜರಿದ್ದರು.

ಏನು ಇದೆ – ಏನು ಇಲ್ಲ


*ಹೋಟೆಲ್ ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರಿಗೆ ಪಾರ್ಸೆಲ್ ಗೆ ಅವಕಾಶ. ಸಮೀಪದ *ಹೊಟೇಲ್ ಗೆ ಹೋಗಲು ಅವಕಾಶ. ವಾಹನ ಬಳಸುವಂತಿಲ್ಲ.
*ಮನೆ ಸಮೀಪದ ಅಂಗಡಿಗಳಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ.
*ಬಾರ್ ಗಳಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪಾರ್ಸೆಲ್ ಅವಕಾಶ.
*ಔಷಧಿ ಖರೀದಿಗೂ ಸಮೀಪದ ಅಂಗಡಿಗಳಿಗೆ ತೆರಳಿ.
*ಹಾಪ್ ಕಾಮ್ಸ್ ಮತ್ತು ಕೆಎಂಎಫ್ ಹಾಲಿನ ಬೂತುಗಳಿಗಷ್ಟೇ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆಯಲು ಅವಕಾಶ. ಬೇಕರಿಗಳಲ್ಲಿ ಅವಕಾಶವಿಲ್ಲ.
*ತಳ್ಳುಗಾಡಿಗಳಲ್ಲಿ ತರಕಾರಿ ಕೊಳ್ಳಲು, ಮಾರಲು ಅವಕಾಶ. ಹೋಂ ಡೆಲಿವರಿಗೂ ಅವಕಾಶ.
*ಮೀನು ಮನೆಗೆ ಕೊಂಡೊಯ್ದು ಮಾರಲು ಅವಕಾಶ. ಬಂದರು ಪ್ರದೇಶಕ್ಕೆ ಸಾರ್ವಜನಿಕರಿಗೆ ನೋ ಎಂಟ್ರಿ.
*ಮದುವೆಗೆ 40 ಮಂದಿ, ಅಂತ್ಯಸಂಸ್ಕಾರಕ್ಕೆ 5 ಮಂದಿ. ಬೀಗರ ಔತಣ, ಮೆಹೆಂದಿ ಕಾರ್ಯಕ್ರಮ ಮಾಡುವಂತಿಲ್ಲ. ಮದುವೆಗೆ ಸಂಚರಿಸಲು ಅನುಮತಿ ಅಗತ್ಯ.
*ತುರ್ತು ಸೇವೆಗಳು, ಆಸ್ಪತ್ರೆಗಳು, ಆರೋಗ್ಯ ಸಿಬ್ಬಂದಿಗಳಿಗಿದೆ ಅವಕಾಶ. ಅಂತಾರಾಜ್ಯ, *ಜಿಲ್ಲಾ ಪ್ರವಾಸಕ್ಕೆ ಅವಕಾಶವಿಲ್ಲ.
*ಕಾಮಗಾರಿ ನಿವೇಶನದಲ್ಲಿ ಕಾರ್ಮಿಕರನ್ನು ಉಳಿಸಿಕೊಂಡು ಕಾಮಗಾರಿ ಮಾಡಬಹುದು.
*ಸರಕು, ಸಾಗಾಟಕ್ಕೆ ಅವಕಾಶ.ಮಂದಿರ,ಚರ್ಚ್,ಮಸೀದಿ ಮತ್ತು ಪ್ರಾರ್ಥನಲಾಯಗಳಲ್ಲಿ ಪೂಜೆಗಳಿಗೆ ಸಾರ್ವಜನಕರಿಗೆ ಅವಕಾಶವಿಲ್ಲ

*ಸಿನೀಮಾಥೀಯೆಟಗಳು ಬಂದ್