

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಫೆಬ್ರವರಿ 4ರಂದು ಮಿಲಾಗ್ರಿಸ್ ಕಾಲೇಜು ಆಫ್ ನರ್ಸಿಂಗ್ ನ ಪ್ರಥಮ ವರ್ಷದ 35 ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು . ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನ ವನ್ನು ಮನುಷ್ಯನನ್ನು ಶತ್ರುವಾಗಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ . ವಿದ್ಯಾರ್ಥಿಗಳು ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಕಾರಣಗಳು , ಅದರ ಎಚ್ಚರಿಕೆಯ ಚಿಹ್ನೆಗಳು ಹಾಗೂ ಅದನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಪ್ಲಾಸ್ಟಿಕ್ ಬಳಕೆ, ಧೂಮಪಾನ, ಮದ್ಯಪಾನ , ತಂಬಾಕು ಸೇವನೆಯಿಂದ ಹೆಚ್ಚುತ್ತಿರುವ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು. ಇದೇ ನಾಟಕವನ್ನು ಫೆಬ್ರವರಿ 8ರಂದು ಸಂಜೆ 4 ಗಂಟೆಗೆ ಫಾರಂ ಮಾಲ್ ನಲ್ಲಿ
ಪ್ರದರ್ಶಿಸಲಾಗುತ್ತದೆ.ಕಾಲೇಜಿನ ನಿರ್ದೇಶಕ ರೆ/ ಫಾ ಬೊನವೆಂಚರ್ ನಜ್ರೆತ್ ಕಾಲೇಜಿನ ಪ್ರಾಂಶುಪಾಲೆ ಡಾ/ ಡಯಾನ. ಲೋಬೋ, ಹಾಗೂ ಇತರ ಅಧ್ಯಾಪಕ ವ್ರಂದದವರು ಉಪಸ್ಥಿತರಿದ್ದರು.

