ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ: ಸಂಭ್ರಮದ ಶಾಲಾರಂಭ

JANANUDI.COM NETWORK

ಗಂಗೊಳ್ಳಿ 01-09-2021: ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ತಳಿರು-ತೋರಣಗಳಿಂದ ಅಲಂಕೃತವಾಗಿ, ಸಜ್ಜುಗೊಂಡ ವಿದ್ಯಾ ಮಂದಿರಕ್ಕೆ ಉತ್ಸಾಹದಿಂದ ಆಗಮಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪಾಲಕರ ಸಭೆ ನಡೆಸಿದ ಮುಖ್ಯೋಪಾಧ್ಯಾಯಿನಿ ಭ. ಕ್ರೆಸೆನ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದ ಭೌತಿಕ ತರಗತಿಗೆ ಸ್ವಾಗತ ಕೋರಿ, ಕೋವಿಡ್ -19 ಮಾರ್ಗಸೂಚಿಗಳನ್ನು ತಿಳಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.