ಗಂಗೊಳ್ಳಿ;ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ ಶಾಲಾ ಸಂಸತ್ತನ್ನು ಜುಲೈ- 25 ರಂದು ರಚಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ ದೀಪ ಹಚ್ಚುವುದರ ಮೂಲಕ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ರೆಸೆನ್ಸ್ ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲಾ ನಾಯಕನಾಗಿ ವೀರೇಶ್ ಖಾರ್ವಿ, ಉಪನಾಯಕಿಯಾಗಿ ಚಂದನಾ, ಪ್ರಮಾಣವಚನ ಬೋಧಿಸಿದರು. ಶಿಕ್ಷಣ ಮಂತ್ರಿಯಾಗಿ ಸೃಷ್ಟಿ, ಕ್ರೀಡಾ ಮಂತ್ರಿಯಾಗಿ ಸಂಜನಾ, ಆಹಾರ ಮಂತ್ರಿಯಾಗಿ ನಮಿತಾ, ಸಾಂಸ್ಕೃತಿಕ ಮಂತ್ರಿಯಾಗಿ ಐಶೂ, ಸ್ವಚ್ಛತಾ ಮಂತ್ರಿಯಾಗಿ ಶಶಿ, ಸಭಾಪತಿಯಾಗಿ ಪ್ರಜ್ಞಾ, ವಿರೋಧ ಪಕ್ಷದ ನಾಯಕಿಯಾಗಿ ಮಾನ್ಯ, ಸಹಾಯಕ ಮಂತ್ರಿಗಳಾದ ಶೈಲೇಶ್,ಪ್ರೀತಮ್, ಪ್ರೀತೇಶ್,ನವನೀತ ಶೆಟ್ಟಿ, ಝುವೈನಾ, ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯೋಪಾಧ್ಯಾಯನಿ ಮಂತ್ರಿಮಂಡಲವನ್ನು ಉದ್ದೇಶಿಸಿ ಎಲ್ಲಾ ಮಂತ್ರಿಗಳ ಅಧಿಕಾರ ಮತ್ತು ಕರ್ತವ್ಯಗಳ ಕುರಿತು ತಿಳಿಸಿದರು. ಇದರ ಜೊತೆಯಲ್ಲಿ ವಿವಿಧ ಸಂಘಗಳಾದ ಇಕೋ ಕ್ಲಬ್, ಸಾಹಿತ್ಯ ಮತ್ತು ಯೋಗ , ಕ್ರೀಡಾ, ಗೈಡ್ಸ್ ಸಂಘಗಳು ಉದ್ಘಾಟನೆಗೊಂಡವು. ನಮ್ರತಾ ಕಾರ್ಯಕ್ರಮ ನಿರೂಪಿಸಿದಳು.