JANANUDI.COM NETWORK
ಬೆಂಗಳೂರು:ಜ.11: ರಾಜ್ಯದ ವಸತಿ ಶಾಲೆಗಳಲ್ಲಿ ಕೊರೋನಾ ಹೆಚ್ಚಾದ್ರೆ ಆ ಶಾಲೆಗಳನ್ನು ಬಂದ್ ಮಾಡುವಂತ ನಿರ್ಧಾರವನ್ನು ಆಯಾಯಾ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು. ವೈಕುಂಠ ಏಕಾದಶಿ, ಮಕರ ಸಂಕ್ರಾಂತಿ ಜಾತ್ರೆಗಳಿಗೆ ಹಾಲಿ ಇರುವಂತ ಕಠಿಣ ಮಾರ್ಗಸೂಚಿ ಕ್ರಮಗಳನ್ನೇ ಅನುಸರಿಸಬೇಕು.
ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಚರ್ಚೆ ನಡೆದ್ಲಿಲ್ಲ. ಕೊರೋನಾ ಹೆಚ್ಚಳ ಆದಲ್ಲಿ ನಿರ್ಧಾರ ಕೈಗೊಳ್ಳೊ ಬೇಕಾಗುವುದು. ಮಾಸ್ಕ್ ಹಾಕದವರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳುವಂತ ನಿರ್ಧಾರವನ್ನು ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಇಂದಿನ ಸಭೆಯ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಮೊದಲನೆಯ ಅಂಶವೆಂದ್ರೇ.. ಕೊರೋನಾ ಏರಿಕೆಯ ಹಿನ್ನಲೆಯಲ್ಲಿ ಕೊರೋನಾ ಕಡಿವಾಣಕ್ಕೆ, ಕೊರೋನಾ ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸುವಂತೆ ಮಾಡೋದಾಗಿದೆ. 1.50 ಲಕ್ಷ ಟೆಸ್ಟ್ ಸಂಖ್ಯೆನ್ನು ಬೆಂಗಳೂರಿನಲ್ಲಿ ಪ್ರತಿದಿನ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಅವರು ತಿಳಿಸಿದರು.
ಹೋಂ ಐಸೋಲೇಷನ್ ನಲ್ಲಿ ಯಾರಿದ್ದಾರೆ. ಅವರ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು ಶೇ.90ರಷ್ಟು ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ತಿಳಿಸಿ, ಬೂಸ್ಟರ್ ಡೋಸ್ ಲಸಿಕೆಯನ್ನು ತ್ವರಿತಗೊಳಿಸೋದರ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಶಾಲೆ-ವಸತಿ ಶಾಲೆಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಆ ಶಾಲೆ, ವಸತಿ ಶಾಲೆಗಳನ್ನು ಬಂದ್ ಮಾಡೋ ಸಂಬಂಧ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳೋದಕ್ಕೆ ಸೂಚಿಸಲಾಗಿದೆ ಎಂದರು.
ಮಕ್ಕಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಮಕ್ಕಳಿಗೆ ಚಿಕಿತ್ಸೆಗಾಗಿ ಔಷಧಿಯನ್ನು ಖರೀದಿಸಿ, ಸಂಗ್ರಹಿಸಿಡೋದಕ್ಕೆ ಸೂಚಿಸಲಾಗಿದೆ. ಮಕ್ಕಳ ವಾರ್ಡ್ ಬೆಡ್ ಕಾಯ್ದಿರಿಸಲು ಸೂಚಿಸಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಪ್ರತಿಭಟನೆ, ಜನ ಸೇರುವಂತ ಕಾರ್ಯಕ್ರಮಗಳನ್ನು ಪೆÇಲೀಸರು ಮೊದಲೇ ಮಾಹಿತಿ ಸಂಗ್ರಹಿಸಿ, ಅದಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳೋದಕ್ಕೆ ಸೂಚಿಸುವಂತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೂಡ ಅವರುತಿಳಿಸಿದರು.
ಜನರು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು. ಮಾಸ್ಕ್ ಧರಿಸದೇ ಇರೋರ ವಿರುದ್ಧ ಪೆÇಲೀಸರು ಹೆಚ್ಚಿನ ಕ್ರಮ ಕೈಗೊಳ್ಳಲು ತಿಳಿಸಲಾಗುತ್ತದೆ. ಜನವರಿ 14ರಂದು ಪ್ರಧಾನಿ ನರೇಂದ್ರ ಮೋದಿಯವರು ಸಭೆ ನಡೆಸಲಿದ್ದಾರೆ. ಆ ಸಭೆಯ ಬಳಿಕ ವೀಕೆಂಡ್ ಕಪ್ರ್ಯೂ, ನೈಟ್ ಕಪ್ರ್ಯೂ ಬಗ್ಗೆ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಳಲಾಗುದು ಎಂದು’ ಅವರು ತಿಳಿಸಿದರು.