ದೈಹಿಕ ಶಿಕ್ಷಕರ ನೇಮಕಾತಿ ತಿದ್ದಪಡಿ ಮಾಡಿ ಮುಖ್ಯಶಿಕ್ಷಕರಾಗಿ ಬಡ್ತಿಗೆ ಅವಕಾಶ ಕಲ್ಲಿಸುವಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ಆಗ್ರಹ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ದೈಹಿಕ ಶಿಕ್ಷಕರ ವೃಂದ ನೇಮಕಾತಿ ನಿಯಮಗಳ ತಿದ್ದಪಡಿ ಮಾಡಿ ಸಹ ಶಿಕ್ಷಕರು ಎಂದು ಪದನಾಮ ಬದಲಾಯಿಸಿ ಸೇವಾ ಜೇಷ್ಟತಯನ್ವಯ ಮುಖ್ಯಶಿಕ್ಷಕರಾಗಿ ಬಡ್ತಿಗೆ ಅವಕಾಶ ಕಲ್ಲಿಸುವಂತೆ ಆಗ್ರಹಿಸಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ ನೇತೃತ್ವದಲ್ಲಿ ಶಿಕ್ಷಕರು ಸಚಿವ ಸುರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು . ನಗರಕ್ಕಿಂದು ಆಗಮಿಸಿದ್ದ ಸಚಿವ ಸುರೇಶ್‌ಕುಮಾರ್ ಅವರನ್ನು ಭೇಟಿಯಾದ ದೈಹಿಕ ಶಿಕ್ಷಕರು , ದೈಹಿಕ ಪ್ರಾಥಮಿಕ , ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹೆಸರನ್ನು ಶಾಲೆಗಳ ನಾಮಫಲಕದಲ್ಲಿ ಜೇಷ್ಠತಾ ಆಧಾರದಲ್ಲಿ ಪ್ರಕಟಿಸಲು , ಹಾಜರಾತಿ ವಹಿಯಲ್ಲಿ ನಮೂದಿಸಲು , ಪ್ರಭಾರ ನೀಡಿಕೆಯಲ್ಲಿನ ಗೊಂದಲ ಪರಿಹರಿಸಲು ಮನವಿಮಾಡಿದರು . ಬಿಇಒ ಕಚೇರಿಗಳಲ್ಲಿನ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆ ನಿಯಮಾನುಸಾರ ತುಂಬಬೇಕು , ಡಯಟ್‌ಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಮೂಲಕ ತುಂಬಬೇಕು , ಪ್ರಾಥಮಿಕ ಶಾಲೆಗಳಲ್ಲಿ ನೆನೆಗುದಿಗೆ ಬಿದ್ದಿರುವ ದೈಹಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿಸಿ ಮತ್ತು ನೇಮಕಕ್ಕೆ ವಿದ್ಯಾರ್ಥಿಗಳ ಸಂಖ್ಯೆಯ ಮಾನದಂಡ ರದ್ದುಪಡಿಸಲು ಮನವಿ ಮಾಡಿಕೊಂಡರು. ಪದವಿ ಪೂರ್ವ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಉಪನ್ಯಾಸಕರನ್ನು ನೇಮಿಸಬೇಕು , ದೈಹಿಕ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ಈ ಹಿಂದೆ ನೀಡುತ್ತಿದ್ದ ವೇತನ ಸಹಿತ ರಜೆ , ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು .ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ -೨ ಇವರ ಹೆಚ್ಚುವರಿ ಹುದ್ದೆಯನ್ನು ದೈಹಿಕ ಶಿಕ್ಷಣ ಸಂಯೋಜಕರ ಹುದ್ದೆಯನ್ನಾಗಿ ಭರ್ತಿ ಮಾಡುವಂತೆ ಕೋರಿದ ಅವರು , ಸರ್ಕಾರಿ , ಅನುದಾನಿತ , ಖಾಸಗಿ ಶಿಕ್ಷಕರಿಗೆ ಪ್ರತಿವರ್ಷವೂ ಕ್ರೀಡಾಕೂಟವನ್ನು ನಡೆಸಲು ಮನವಿ ಮಾಡಿದರು . ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಮತ್ತು ಇತರೆ ಶಿಕ್ಷಕರಿಗೆ ನಿಗಧಿಪಡಿಸಿರುವಂತೆ ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೋಧಿಸವ ಅವಧಿಗಳ ಆಧಾರದ ಮೇಲೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲು ಮನವಿ ಮಾಡಿದರು . ಸ್ಥಳದಲ್ಲೇ ಇದ್ದ ವಿಧಾನಪರಿಷತ್ ಶಾಸಕರಾದ ಡಾ.ವೈ.ಎ.ನಾರಾಯಣಸ್ವಾಮಿ , ಚಿದಾನಂದಗೌಡರು ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ ಮಾಡಿದರು . ಈ ಸಂದರ್ಭದಲ್ಲಿ ಸಹ್ಯಾದ್ರಿ ಉದಯಕುಮಾರ್ , ಟಿ.ಕೆ.ನಟರಾಜ್.ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಮುರಳಿ ಮೋಹನ್ , ಖಜಾಂಚಿ ಆರ್.ನಾಗರಾಜ್ , ಶ್ರೀನಿವಾಸಯ್ಯ ಮತ್ತಿತರರಿದರು .