ಕೋಲಾರ, ಆ-1, ಸ್ಥಗಿತವಾಗಿರುವ 2ನೇ ಹಂತದ ಅರಣ್ಯ ಭೂ ಒತ್ತುವರಿ ಕಾರ್ಯಾಚರಣೆ ಮುಂದುವರೆಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಸರ್ಕಾರದ ಅರಣ್ಯ ಭೂಮಿಯನ್ನು ಉಳಿಸಬೇಕೆಂದು ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
1 ಎಕರೆ 2 ಎಕರೆ ಒತ್ತುವರಿ ಮಾಡಿಕೊಂಡಿರುವ ಸಣ್ಣ ರೈತರ ಮೇಲೆ ತಮ್ಮ ಪ್ರತಾಪವನ್ನು ತೋರಿಸಿ ಒತ್ತುವಿರ ತೆರವುಗೊಳಿಸಿದ ಅರಣ್ಯ ಅಧಿಕಾರಿಗಳು ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಲಾಡ್ಯ ರಾಜಕೀಯ ವ್ಯಕ್ತಿಗಳ ಭೂ ಒತ್ತುವರಿ ತೆರವು ಯಾವಾಗ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ನೂರಾರು ಜೆ.ಸಿ.ಬಿಗಳ ಮೂಲಕ ಅಬ್ಬರಿಸಿ ರಾಷ್ಟçಮಟ್ಟಮದಲ್ಲಿ ಸುದ್ದಿ ಮಾಡಿ ಸಂಸದರು ಅರಣ್ಯಾಧಿಕಾರಿಗಳ ಮೇಲೆ ತಮ್ಮ ಪ್ರತಾಪ ತೋರಿಸಿದ ನಂತರ ಕಾರ್ಯಾಚಣೆ ದಿನೇ ದಿನೇ ಸ್ಥಗಿತಗೊಳಿಸಲು ಕಾರಣವೇನು. ಮಾಜಿ ಸಂಸದರ ಆರ್ಭಟಕ್ಕೆ ಭಯಬಿದ್ದು, ಮಾಜಿ ಶಾಸಕರು ಹಿರಿಯ ರಾಜಕಾರಣಿಯಾದಂತಹ ಕೆ.ರಮೇಶ್ಕುಮಾರ್ ರವರ ನೂರಾರು ಎಕರೆ ಅರಣ್ಯ ಭೂ ಒತ್ತುವರಿ ರಕ್ಷಣೆ ಮಾಡಲು ಅಮಾಯಕ ರೈತರ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಿ ರಾಜಕಾರಣಿಗಳಿಗೆ ತಮ್ಮ ಅಧಿಕಾರವನ್ನು ನಿಷ್ಠೆ ತೋರಿಸಿದರೆ ಎಂದು ಆರೋಪ ಮಾಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಮಾತನಾಡಿ ನೂರಾರು ವರ್ಷಗಳ ಅನುಭವದಲ್ಲಿರುವ ಕಂದಾಯ ಸರ್ವೆ ಅಧಿಕಾರಿಗಳೇ ದರಖಾಸು ಕಮಿಟಿ ಮೂಲಕ ಸಾಗುವಳಿ ಚೀಟಿ ನೀಡಿರುವ ಮೂಲಕ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅಮಾಯಕ ರೈತರಿಂದ ಲಕ್ಷ ಲಕ್ಷ ಲಂಚ ಪಡೆದು ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ದ ಯಾವ ಕ್ರಮ ಕೈಗೊಂಡಿರುವಿರಿ ಎಂಬುದನ್ನು ಸಾರ್ವಜನಿಕವಾಗಿ ದಾಖಲೆಗಳ ಸಮೇತ ಹೇಳಿಕೆ ನೀಡಿ ಎಂದು ಸವಾಲು ಹಾಕಿದರು.
ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ ನೂರಾರು ಎಕರೆ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ರಾಷ್ಟಿçÃಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ಭೂಗಳ್ಳರೂ ಊಸರವಲ್ಲಿ ರಾಜಕಾರಣಿಗಳ ವಿರುದ್ದ ತಮ್ಮ ಪ್ರತಾಪ ಏಕೆ ತೋರಿಸುತ್ತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಒಂದೇ ನ್ಯಾಯ ಅಲ್ಲವೆ ಎಂದು ಪ್ರಶ್ನೆ ಮಾಡಿದರು.
ಕಂದಾಯ ಅರಣ್ಯ ಅಧಿಕಾರಿಗಳ ಜಂಟಿ ಸರ್ವೆ ನೆಪದಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಲು ಹಿಂದೇಟು ಹಾಕುವುದನ್ನು ಹಿಂಪಡೆಯಬೇಕು. ಮಾನ್ಯ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಚರ್ಚೆ ಮಾಡಿ ಎಚ್ಚಿನ ಭದ್ರತೆ ಪಡೆದು ಎರಡನೇ ಹಂತದ ಪ್ರಭಾವಿ ರಾಜಕಾರಣಿಗಳ ಅರಣ್ಯ ಒತ್ತುವರಿ ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡದೇ ಇದ್ದರೆ, ಅಮಾಯಕ ರೈತರಿಂದ ಭೂಸ್ವಾದೀನವಾಗಿರುವ ಅರಣ್ಯ ಭೂಮಿಯನ್ನು ಮತ್ತೆ ವಾಪಸ್ಸು ಕೊಡಿಸುವಂತೆ ರೈತ ಸಂಘದಿAದ ಅರಣ್ಯಾಧಿಕಾರಿಗಳ ವಿರುದ್ದ ಅರಣ್ಯ ಸಚಿವರ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಅಧಿಕಾರಿ ಏಡುಕೊಂಡಲು ರವರು ಯಾವುದೇ ಕಾರಣಕ್ಕೂ ಒಂದು ಇಂಚು ಅರಣ್ಯ ಭೂಮಿಯ ಒತ್ತುವರಿಯನ್ನು ಬಿಡುವುದಿಲ್ಲ. ಶ್ರೀಮಂತರೇ ಇರಲಿ ಪ್ರಭಾವಿ ರಾಜಕಾರಣಿಗಳೇ ಇರಲಿ ಅವರ ದೌರ್ಜನ್ಯಕ್ಕೆ ಭಯ ಬೀಳುವ ಪ್ರಶ್ನೆಯೇ ಇಲ್ಲ. ಮುಂದಿನ ತಿಂಗಳಲ್ಲಿ ಎರಡನೇ ಹಂತದ ಅರಣ್ಯ ಭೂ ಒತ್ತುವಿರ ಕಾರ್ಯಾಚರಣೆ ಮುಂದುವರೆಸುತ್ತೇವೆAದು ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ತಾ.ಅಧ್ಯಕ್ಷ ಮೂರಂಡಳ್ಳಿ ಶಿವಾರೆಡ್ಡಿ, ಮಂಗಸAದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಾಲೂರು ತಾ.ಅದ್ಯಕ್ಷ ಯಲ್ಲಣ್ಣ, ಹರೀಶ್, ಅಪ್ಪೊಜಿರಾವ್, ರಾಮಸಾಗರ ವೇಣು, ಮುದುವಾಡಿ ಚಂದ್ರಪ್ಪ, ರತ್ನಮ್ಮ, ಚೌಡಮ್ಮ, ಶೈಲಜ, ಮುನಿವೆಂಕಟಮ್ಮ, ಅಮರಮ್ಮ, ವಕ್ಕಲೇರಿ ಹನುಮಯ್ಯ, ಇನ್ನು ಮುಂತಾದವರು ಇದ್ದರು.