ಸಂತ ಮೇರಿಯ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ:ವಿಶ್ವ ಪರಿಸರ ದಿನ ಆಚರಣೆ

JANANUDI.COM NETWORK

ಸಂತ ಮೇರಿಯ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಂತ ಮೇರಿ ಫ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಸುಂತಾ ಲೋಬೊ ಅತಿಥಿಯಾಗಿ ಆಗಮಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಡೋರಾ ಸುವಾರಿಸ್ ಇವರು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ‘ಪ್ರಕೃತಿ ಇಕೋ ಕ್ಲಬ್ ‘ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ಆನ್ನಿ ಕ್ರಾಸ್ತಾ, ಶ್ರೀಮತಿ ಸಿಂತಿಯಾ ರಾಡ್ರಿಗಸ್, ಶ್ರೀಮತಿ ಗೀತಾ ನೊರೊನ್ನಾ, ಶ್ರೀಮತಿ ಜ್ಯೋತಿ ಡಿಸಿಲ್ವಾ, ಶ್ರೀಮತಿ ಶಾಂತಿ ರಾಣಿ, ಕುಮಾರಿ ಪ್ರೀತಿ ಹಾಗೂ ಶಿಕ್ಷಕಿ ಶ್ರೀಮತಿ ಹಾಜರಿದ್ದರು.