ಕುಂದಾಪುರ,ನ,30; ‘ನಾವೆಲ್ಲ ಮಾನವರು, ವಿದ್ಯಾ ಸಂಸ್ಥೆಗಳು ನಮ್ಮನ್ನು ವಿದ್ಯೆ ನೀಡಿ ವಿಶ್ವ ಮಾನವರನ್ನಾಗಿ ರೂಪಿಸುತ್ತವೆ, ನಮ್ಮನ್ನು ಮೇದಾವಿಗಳನ್ನಾಗಿ ಮಾಡುತದೆ, ಸಾಧಕ ವಿದ್ಯಾರ್ಥಿಗಳ ಮನೆಯ ವಾತವರಣಕ್ಕೂ ಇತರ ವಿದ್ಯಾರ್ಥಿಗಳ ಮನೆಯ ವಾತವರಣಕ್ಕೂ ವ್ಯತ್ಯಾಸ ಇದೆ, ಸಾಧಕ ವಿದ್ಯಾರ್ಥಿಗಳ ಮನೆಯ ವಾತವರಣವು ವಿದ್ಯಾರ್ಥಿಗಳಿಗೆ ದ್ಯಾನದಿಂದ ಒದುವಂತಹ ವಾತವರಣ ಪೋಷಕರು ನಿರ್ಮಿಸಿದ್ದಾರೆ, ಹಾಗೇ ನಮ್ಮ ಮಕ್ಕಳಿಗೆ ಒದಿಕೊಳ್ಳಲು ಅಡ್ಡಿಯಾಗದಂತಹ ವಾತವರಣ ನಿರ್ನಮಿಸಬೇಕು, ಇಂದಿನ ಮಕ್ಕಳಿಗೆ ಅವಕಾಶಗಳು ತುಂಬಾ ದೊರಕುತ್ತವೆ, ಇದನ್ನು ಬಳಸಿಕೊಂಡು ಸಾಧಕರಾಗಬೇಕು, ಹಾಗೇ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಅತಿ ಮುಖ್ಯವಾಗಿ ಬೇಕು ಅದನ್ನು ಜೀವನಾದಲ್ಲಿ ಅಳವಡಿಸಿಕೊಳ್ಳಿ, ಹಾಗೇ ನೀವು ಕಲಿತ ವಿದ್ಯಾ ಸಂಸ್ಥೆಗಳನ್ನು ಮರೆಯ ಬೇಡಿ” ಎಂದು ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಹೇಳಿದರು.
ಅವರು ನ. 29 ರಂದು ನಡೆದ ಪ್ರತಿಷ್ಠಿತ ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಾಧಕ ಮಕ್ಕಳನ್ನು ಬಹುಮಾನ ವಿತರಿಸಿ ಅಭಿನಂದಿಸಿದರು. ಇನ್ನೊರ್ವ ಅತಿಥಿ ಪಂಚಾಯತ್ ಅಭಿವದ್ಧಿ ಅಧಿಕಾರಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಆಪ್ತ ಕಾರ್ಯದರ್ಶಿಯಾದ ಹರೀಶ್ ಕುಮಾರ್ ಶೆಟ್ಟಿ ‘ಕ್ರೈಸ್ತರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ, ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು, ಕಲಿಕೆ, ನೈತಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಇದೆ, ನಾನು ಕೂಡ ಚಿಕ್ಕನವನಿರುವಾಗ ಮಂಗಳೂರಿನಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕಲಿತಿದ್ದೇನೆ, ನನ್ನ ತಂದೆ ಸಂತ ಮೇರಿಸ್ ಪ್ರೌಢ ಶಾಲೆಯಲ್ಲಿ ಕಲಿತವರು, ಅವರಿಗೆ ಈ ಶಾಲೆ ಅಂದರೆ ತುಂಬ ಅಭಿಮಾನ, ಇಂದು ನಾನು ಈ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಕ್ಕೆ ಅವರ ಆತ್ಮಕ್ಕೆ ಸಂತೋಷವಾಗಿದೆ ಎಂದು ನನ್ನ ಭಾವನೆ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ದೇಶ ಭಕ್ತರನ್ನಾಗಿ ಬೆಳೆಸಬೇಕು’ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಜಂಟಿ ಕಾರ್ಯದರ್ಶಿ, ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ।ಪೌಲ್ ರೇಗೊ ‘ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಶಿಕ್ಷಕೇತರರಿಗೆ ಇಲ್ಲಿ ನೆರೆದ ಎಲ್ಲರಿಗೂ ಕಾಲೇಜಿನ ವಾರ್ಷಿಕೋತ್ಸವದ ಶುಭಾಷಯಗಳು, ನೀವು ನಿಮ್ಮ ಕುಟುಂಬದಲ್ಲಿ ಪ್ರೀತಿ ಮಮತೆಯಿಂದ ಜೀವಿಸಬೆಕು, ಪೋಷಕರು ಮಕ್ಕಳನ್ನು ಪ್ರೀತಿಸಬೇಕು, ಅವರಿಗೆ ನೀವು ಒಳ್ಳೆಯ ಮಾರ್ಗದರ್ಶಕರಾಗಬೇಕು, ಇದು ಕೇವಲ ವಾರ್ಷಿಕೋತ್ಸವ ಅಲ್ಲ, ಇದು ಸಂಸ್ಥೆ ಮಾಡಿದ ಸಾಧನೆಗಳ ಮೇಲೆ ಬೆಳಕು ಚೆಲ್ಲುವಂತಹ ವಿಶೇಷ ಕಾರ್ಯಕ್ರಮ, ವಿಶೇಷ ದಿನ, ಇಂದು ಬಹುಮಾನ ಪಡೆದವರಿಗೆ, ಕಾರ್ಯಕ್ರಮ ನೀಡುವರಿಗೆ, ಸಾಧನೆ ಮಾಡಿದವರಿಗೆ’ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ “ಇಲ್ಲಿ ಒಳ್ಳೆಯ ವಿದ್ಯಾಭಾಸ ಪಡೆದು ಸಮಾಜ ಕಟ್ಟುವ ಕೆಲಸ ಮಾಡಿ’ ಎಂದು ಸಂದೇಶ ನೀಡಿದರು. ಅವರು ಅಥಿಥಿಗಳನ್ನು, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ದಾನಿಗಳನ್ನು ಗೌರವಿಸಿದರು.
ಉಪನ್ಯಾಸಕರಾದ ನಾಗರಾಜ್ ಶೆಟ್ಟಿ, ಪ್ರೀತಿ ಕ್ರಾಸ್ತಾ, ಸುಷ್ಮಾ ಕೆ.ಎನ್., ಶರ್ಮಿಳಾ ಮಿನೇಜೆಸ್, ವಸಂತ ಕುಮಾರ್ ಶೆಟ್ಟಿ, ಪ್ರಫುಲ್ಲಾ ಇವರು ವ್ಯಕ್ತಿ ಪರಿಚಯ ಹಾಗೂ ಬಹುಮಾನ ವಿತರಣೆ, ಗೌರವ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟರು. ವಿದ್ಯಾರ್ಥಿಗಳು ಹಲವಾರು ಬಗೆಯ ಮನೋರಂಜನೆಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ನಾಯಕ ಮಹ್ಮಮದ್ ಆಫ್ರಾನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜೊನಿಟಾ ಮೆಂಡೊನ್ಸಾ ವಂದಿಸಿದಳು, ವಿದ್ಯಾರ್ಥಿಗಳಾದ ರೊಸ್ಲಿನ್ ಡಿಸೋಜಾ, ಫಾತಿಮಾತ್ತುಲ್ ಹನೆಲ್ಟ್, ಸರಿತಾ ವಾಸ್ ನಿರೂಪಿಸಿದರು.