JANANUDI.COM NETWORK
.ಕುಂದಾಪುರ,ಜ.1: ಸ್ಥಳಿಯ ಸಂತಮೇರಿಸ್ ಮೇರಿಸ್ ಕಾಲೇಜಿನಲ್ಲಿ ಹೊಸ ವರುಷದಂದು ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ವಿಂಗಡಿಸಿ ಕ್ರಿಯಾಶೀಲ ಚಟುವಟಿಗೆಳ ಸ್ಫರ್ಧೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳನ್ನು ಪಿಂಗ್ ಪಾಂಗ್, ಡಿಂಗ್ ಡೊಂಗ್, ಸಿಂಗ್ ಸೊಂಗ್, ಟಿಂಗ್ ಟೊಂಗ್ 4 ತಂಡಗಳನ್ನಾಗಿ ವಿಂಗಡಿಸಿ ಸ್ಫರ್ಧೆಯನ್ನು ಉದ್ಘಾಟಿಸಲಾಯಿತು. ತಂಡಗಳಿಗೆ ಕಸದಿಂದ ರಸ, ಆಹಾರ ತಯಾರಿಕೆ, ಪುರಾತನ ವಸ್ತು, ನಾಣ್ಯಗಳ ಸಂಗ್ರಹ ಇಂತಹ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರು, ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಪೂಜ್ಯನೀಯ ಸ್ಟ್ಯಾನಿ ತಾವ್ರೊ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಕ್ರಿಯಾಶೀಲ ಚಟುವಟಿಕೆಗಳನ್ನು ಹೊಗಳಿ ಅವರಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ಪೂಜ್ಯನೀಯ ವಿಜಯ ಡಿಸೋಜ ರವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಗುಂಪು ಚಟುವಟಿಕೆಯಲ್ಲಿ ನಡೆಸಿದ ವಿವಿಧ ಕಲಾತ್ಮಕ ಚಟುವಟಿಕೆಗಳನ್ನು ಪರೀಕ್ಷಿಸಿ ಅವರ ಭಾಗವಹಿಸುವಿಕೆ, ಅವರಲ್ಲಿಯ ಪ್ರತಿಭೆಗಳನ್ನು ಕೊಂಡಾಡಿ ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ರವಿದಾಸ ಶೆಟ್ಟಿಯವರು ಉಪಸ್ಥಿತರಿದ್ದು ಶಿಸ್ತು ಜೀವನದ ಅವಿಭಾಜ್ಯ ಅಂಗ, ನಿಮಗೆ ಈ ಕಾಲೇಜಿನಲ್ಲಿ ಶಿಸ್ತಿನ ಶಿಕ್ಷಣ ಲಭ್ಯವಿದೆ, ಅದನ್ನು ಸಾಕಾರಗೊಳಿಸಿಕೊಳ್ಳಿ ವಿದ್ಯಾರ್ಥಿಗಳ ಪ್ರತಿಭೆ ಹೊರ ಹೊಮ್ಮಲು ಇಂತ ಕಾರ್ಯಕ್ರಮಗಳು ಅತಿಮುಖ್ಯ’ ಶುಭ ಹಾರೈಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇμÁ್ಮ ಫೆನಾರ್ಂಡಿಸ್ ವಿಜೇತರ ಹೆಸರನ್ನು ಘೋಷಿಸಿ ವಿದ್ಯಾರ್ಥಿಗಳ ಸಕಾರಾತ್ಮಕ ಭಾಗವಸುವಿಕೆಯನ್ನು ಶ್ಲಾಘಿಸಿದರು.
ಈ ಸಮಾರಂಭದ ಸಂಯೋಜಕರಾದ ಗಣಕ ವಿಜ್ಞಾನದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಸ್ವಾಗತಿಸಿದರು,ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಮಂಜುಳಾ ನಾಯರ್, ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ವಿದ್ಯಾರ್ಥಿ ಲಿಯಾಂಡರ್ ಕ್ರಾಸ್ಟೊ ವಂದಿಸಿದರು.