

ಕುಂದಾಪುರ: ಪ್ರತಿದಿನ ಪಾಠ ಆಟದ ನಡುವೆ ಶಾಲೆಯಲ್ಲೇ ಕಳೆಯುತ್ತಿದ್ದ ವಿದ್ಯಾರ್ಥಿಗಳು ಗಾಂಧಿ ಜಯಂತಿಯ ಪ್ರಯುಕ್ತ ಹತ್ತಾರು ವಿದ್ಯಾರ್ಥಿಗಳು ಪೋಲಿಸ್ ಠಾಣೆಯ ಮೆಟ್ಟಿಲೇರಿ ಪೋಲಿಸರನ್ನೇ ಪ್ರಶ್ನಿಸಿದರು. ಇದು ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ವಿದ್ಯಾರ್ಥಿಗಳು ಕುಂದಾಪುರ ನಗರ ಠಾಣೆ ಮತ್ತು ಸಂಚಾರಿ ಠಾಣೆಗೆ “ತೆರೆದ ಮನೆ” ಯೋಜನೆಯಡಿ ಭೇಟಿ ನೀಡಿ ಪೋಲಿಸ್ ಠಾಣೆಯ ಕಾರ್ಯ ವೈಖರಿಯ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಗಳು ಪೋಲಿಸರಿಗೆ ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಕೇಳಿದಾಗ ಅಷ್ಟೇ ಸಮಾಧಾನದಿಂದ ವಿದ್ಯಾರ್ಥಿಗಳ ಪ್ರಶ್ನೆಗೆ ಪೋಲಿಸ್ ಅಧಿಕಾರಿಗಳು ಉತ್ತರಿಸಿ ವಿದ್ಯಾರ್ಥಿಗಳ ಮುಖದಲ್ಲಿ ನಗು ತರಿಸಿದರು.
ಠಾಣೆಯಲ್ಲಿ ಪೆÇಲೀಸರ ಕಾರ್ಯ ವೈಖರಿ, ಮಕ್ಕಳ ಹಕ್ಕುಗಳ ರಕ್ಷಣೆ, ಪೆÇೀಕ್ಸೊ ಕಾಯಿದೆ ಕುರಿತು ಅರಿವು ಮೂಡಿಸಲಾಯಿತು. ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ನಮ್ಮ ಠಾಣೆಗೆ ಬಂದರೆ ಮೊದಲು ದೂರು ತೆಗೆದುಕೊಳ್ಳುವುದು, ಎಫ್ಐಆರ್ ದಾಖಲೆ, ತನಿಖೆ, ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆ, ಅಪರಾಧ ಕೃತ್ಯಗಳ ತನಿಖೆ ಹಾಗೂ ತನಿಖೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಸೇರಿದಂತೆ ವಿವಿಧ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ತಾತ್ಕಾಲಿಕ ಸೆಲ್, ಬೇಡಿ, ಬಂದೂಕು ಸೇರಿದಂತೆ, ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಅಪರಾಧ, ರಸ್ತೆ ನಿಯಮಗಳ ಪಾಲನೆ ಕುರಿತು ಮಾಹಿತಿ ನೀಡಲಾಯಿತು.
ಕುಂದಾಪುರ ನಗರ ಠಾಣಾ ಠಾಣಾಧಿಕಾರಿ ವಿನಯ್ ಕೋರ್ನಹಳ್ಳಿ ಮಾತನಾಡಿ, ಕಾನೂನು ಗೌರವಿಸಿ ಪಾಲಿಸುವವರು ಮತ್ತು ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವವರಿಗೆ ಕಾನೂನಿನ ರಕ್ಷಣೆ ಸದಾ ಕಾಲ ಇರುತ್ತದೆ. ಸಮಾಜದಲ್ಲಿ ಉತ್ತಮ ಹೆಸರು ಮತ್ತು ಗೌರವ ಸಲ್ಲುತ್ತದೆ ಎಂದರು.
ಮಹಿಳಾ ಕಾನ್ಸ್ಟೆಬಲ್ ನಾಗಶ್ರೀ ಮಾತನಾಡಿ ಸಮುದಾಯದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಒಡನಾಟ ಒಳ್ಳೆಯದಲ್ಲ, ಅವರಲ್ಲಿ ಅನುಮಾನಾಸ್ಪದ ನಡೆ ಕಂಡುಬಂದಲ್ಲಿ ಮೊದಲು ಶಿಕ್ಷಕರಿಗೆ ಮಾಹಿತಿ ನೀಡಬೇಕು. ಅಲ್ಲದೆ ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸುವುದು ಅಪಾಯಕಾರಿ ಎಂದರು. ಸಿಬ್ಬಂದಿಗಳಾದ ಆನಂದ, ರವಿಚಂದ್ರ, ಜ್ಯೋತಿ ಮೊದಲಾದವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಇಂಟರ್ಯಾಕ್ಟ್ ಕ್ಲಬ್ ಸಂಚಾಲಕಿ ಸ್ಮಿತಾ ಡಿ ಸೋಜಾ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಉಪಸ್ಥಿತರಿದ್ದರು.







